Smartphone Battery: ಹೊಸ ಫೋನ್ ತಗೊಂಡ್ರೆ, ಬ್ಯಾಟರಿ ಫುಲ್ ಚಾರ್ಜ್ ಮಾಡಿಯೇ ಬಳಸಿ

|

Updated on: Jan 23, 2024 | 7:31 AM

ಅಂಗಡಿಯಲ್ಲಾದರೆ, ಅಥವಾ ಮೊಬೈಲ್ ಶೋರೂಮ್​ನಲ್ಲಾದರೆ, ಹೊಸ ಫೋನ್ ಅನ್ನು ಬ್ಯಾಟರಿ ಫುಲ್ ಆಗುವವರೆಗೆ ಚಾರ್ಜ್ ಮಾಡಿ ಎಂದು ಸಲಹೆ ನೀಡುತ್ತಾರೆ. ಬ್ಯಾಟರಿ ಫುಲ್ ಮಾಡಿದ ಬಳಿಕವೇ ಉಪಯೋಗಿಸುವುದು ಯಾಕೆ ಸೂಕ್ತ? ಈ ವಿಡಿಯೊ ನೋಡಿ.

ಹೊಸ ಫೋನ್ ಕೊಳ್ಳುವುದೆಂದರೆ ಅದೊಂದು ಖುಷಿಯ ವಿಚಾರ. ಅದರಲ್ಲೂ ಲೇಟೆಸ್ಟ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಬಿಡುಗಡೆ ಮಾಡಿರುವ ಫೋನ್ ಎಂದಾದರೆ, ಮತ್ತಷ್ಟು ಖುಷಿ ಹೆಚ್ಚಾಗುತ್ತದೆ. ಹಳೆಯ ಫೋನ್ ಕೊಟ್ಟು, ಅಥವಾ ಎಕ್ಸ್​ಚೇಂಜ್ ಮೂಲಕ ಹೊಸ ಫೋನ್ ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ದುಬಾರಿ ಬೆಲೆಯ ಫೋನ್​​ಗಳಿಗೆ ಕ್ಯಾಶ್​​ಬ್ಯಾಕ್, ಡಿಸ್ಕೌಂಟ್ ಮತ್ತು ಸುಲಭ ಇಎಂಐ ಕೊಡುಗೆ ನೀಡುವುದರಿಂದ ಹೆಚ್ಚಿನ ಜನರು ಹೊಸ ಮೊಬೈಲ್ ಖರೀದಿಸುತ್ತಾರೆ. ಹಾಗೆ ಖರೀದಿಸುವ ಸಂದರ್ಭದಲ್ಲಿ ಅಂಗಡಿಯಲ್ಲಾದರೆ, ಅಥವಾ ಮೊಬೈಲ್ ಶೋರೂಮ್​ನಲ್ಲಾದರೆ, ಹೊಸ ಫೋನ್ ಅನ್ನು ಬ್ಯಾಟರಿ ಫುಲ್ ಆಗುವವರೆಗೆ ಚಾರ್ಜ್ ಮಾಡಿ ಎಂದು ಸಲಹೆ ನೀಡುತ್ತಾರೆ. ಬ್ಯಾಟರಿ ಫುಲ್ ಮಾಡಿದ ಬಳಿಕವೇ ಉಪಯೋಗಿಸುವುದು ಯಾಕೆ ಸೂಕ್ತ? ಈ ವಿಡಿಯೊ ನೋಡಿ.