ಧಾರವಾಡದಲ್ಲಿ ಮೂರು ನಾಯಿ ಮರಿಗಳನ್ನು ಕಚ್ಚಿ ಕೊಂದ ಹಾವು: ವಿಡಿಯೋ ವೈರಲ್

ಧಾರವಾಡದಲ್ಲಿ ಮೂರು ನಾಯಿ ಮರಿಗಳನ್ನು ಕಚ್ಚಿ ಕೊಂದ ಹಾವು: ವಿಡಿಯೋ ವೈರಲ್

ಕಿರಣ್ ಹನುಮಂತ್​ ಮಾದಾರ್
|

Updated on: Jun 25, 2023 | 12:59 PM

ಧಾರವಾಡದ ಮದಿಹಾಳ ಬಡಾವಣೆಯಲ್ಲಿದ್ದ ನಾಯಿ ಮರಿಗಳ ಗೂಡಿನ ಮೇಲೆ ಹಾವೊಂದು ದಾಳಿ ಮಾಡಿದ್ದು, ಮೂರು ಮರಿಗಳನ್ನು ಕಚ್ಚಿ ಕೊಂದಿದೆ. ಬಳಿಕ ಒಂದು ಮರಿ ನುಂಗುತ್ತಿದ್ದಾಗ ಉಳಿದ ಮರಿಗಳನ್ನು ರಕ್ಷಣೆ ಮಾಡಲಾಗಿದೆ.

ಧಾರವಾಡ: ಇತ್ತೀಚೆಗೆ ಹಾವುಗಳ ಕಾಟ ಹೆಚ್ಚಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಮಂಡ್ಯ ಜಿಲ್ಲೆಯಲ್ಲಿ ಬೃಹತ್ ಹೆಬ್ಬಾವನ್ನ ರಕ್ಷಣೆ ಮಾಡಲಾಗಿತ್ತು. ಇದೀಗ ಧಾರವಾಡ(Dharwad)ದ ಮದಿಹಾಳ ಬಡಾವಣೆಯಲ್ಲಿದ್ದ ನಾಯಿ ಮರಿಗಳ ಗೂಡಿನ ಮೇಲೆ ಹಾವೊಂದು ದಾಳಿ ಮಾಡಿದ್ದು, ಮೂರು ಮರಿಗಳನ್ನು ಕಚ್ಚಿ ಕೊಂದಿದೆ. ಬಳಿಕ ಒಂದು ಮರಿ ನುಂಗುತ್ತಿದ್ದಾಗ ಉಳಿದ ಮರಿಗಳನ್ನು ರಕ್ಷಣೆ ಮಾಡಲಾಗಿದೆ. ನಂತರ ಉರಗ ಪ್ರೇಮಿ ಯಲ್ಲಪ್ಪ ಜೋಡಳ್ಳಿ ಎಂಬುವವರು ಹಾವು ಹಿಡಿದು, ಹಾವು ಮತ್ತು ನಾಯಿ ಮರಿಗಳನ್ನು ಬೇರ್ಪಡಿಸಿ, ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ