ತುಮಕೂರಿನ ಕೊರೆಟೆಗೆರೆ ಬಳಿ ವಿಭಿನ್ನ ಬಗೆಯ ಹಾವಿನ ರಕ್ಷಣೆ, ಸರೀಸೃಪಕ್ಕೆ ಬೆಕ್ಕಿನ ಕಣ್ಣುಗಳು!
ಸ್ಥಳೀಯ ಉರಗ ತಜ್ಞ ದಿಲೀಪ್ ಅವರು ಗೆಸ್ಟ್ ಹೌಸ್ ಗೆ ಆಗಮಿಸಿ ಹಾವನ್ನು ರಕ್ಷಿಸಿದ್ದಾರೆ ಮತ್ತು ಅದನ್ನು ಸುರಕ್ಷಿತವಾದ ಸ್ಥಳಕ್ಕೆ ಒಯ್ದು ಬಿಟ್ಟಿದ್ದಾರೆ.
ತುಮಕೂರು: ವಿಡಿಯೋದಲ್ಲಿ ನಿಮಗೆ ಕಾಣುತ್ತಿರುವ ಹಾವು ಭಿನ್ನವಾಗಿರುವುದು ನಿಜ, ಆದರೆ ಅದರ ಕಣ್ಣುಗಳನ್ನು ಗಮನಿಸಿ ಅವು ಬೆಕ್ಕಿನ ಕಣ್ಣುಗಳಂತಿವೆ. ತುಮಕೂರು ಜಿಲ್ಲೆ ಕೊರಟಗೆರೆ (Koratagere) ತಾಲ್ಲೂಕಿನ ತಣ್ಣೇನಹಳ್ಳಿ ಗ್ರಾಮದ ನಿವಾಸಿ ಮುರಳೀಧರ ಎನ್ನುವವರ ಗೆಸ್ಟ್ ಹೌಸ್ ನಲ್ಲಿದ್ದ (guesthouse) ಕಾರ್ಟನ್ ಬಾಕ್ಸ್ ನಲ್ಲಿ ಹಾವು ಪತ್ತೆಯಾಗಿದೆ. ಸ್ಥಳೀಯ ಉರಗ ತಜ್ಞ ದಿಲೀಪ್ (Dilip) ಅವರು ಗೆಸ್ಟ್ ಹೌಸ್ ಗೆ ಆಗಮಿಸಿ ಹಾವನ್ನು ರಕ್ಷಿಸಿದ್ದಾರೆ ಮತ್ತು ಅದನ್ನು ಸುರಕ್ಷಿತವಾದ ಸ್ಥಳಕ್ಕೆ ಒಯ್ದು ಬಿಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ