Snake rescued: ಮಂಡ್ಯ ರಮೇಶ್ ಮನೆಯಲ್ಲಿ ಕಾಣಿಸಿದ ಅಪರೂಪದ ಹಾವಿನ ಮರಿ
mandya ramesh: ಲಾಕ್‌ಡೌನ್‌ನಲ್ಲಿ ಮನೆಯಲ್ಲಿದ್ದ ನಟ ಮಂಡ್ಯ ರಮೇಶ್ ಮನೆಯಲ್ಲಿ ಹಾವು ಕಾಣಿಸಿಕೊಂಡಿದೆ. ಮೈಸೂರಿನ ದಟ್ಟಗಳ್ಳಿ ನಿವಾಸದಲ್ಲಿ ಪುಟಾಣಿ ಹಾವು ಕಂಡ ಮಂಡ್ಯ ರಮೇಶ್ ಪ್ಲಾಸ್ಟಿಕ್ ಡಬ್ಬದಲ್ಲಿ ಮುಚ್ಚಿಟ್ಟಿದ್ದರು.
ಮಂಡ್ಯ ರಮೇಶ್ ಮನೆಯಲ್ಲಿ ಕಾಣಿಸಿದ ಅಪರೂಪದ ಹಾವಿನ ಮರಿ
ಲಾಕ್‌ಡೌನ್‌ನಲ್ಲಿ ಮನೆಯಲ್ಲಿದ್ದ ನಟ ಮಂಡ್ಯ ರಮೇಶ್ ಮನೆಯಲ್ಲಿ ಹಾವು ಕಾಣಿಸಿಕೊಂಡಿದೆ. ಮೈಸೂರಿನ ದಟ್ಟಗಳ್ಳಿ ನಿವಾಸದಲ್ಲಿ ಪುಟಾಣಿ ಹಾವು ಕಂಡ ಮಂಡ್ಯ ರಮೇಶ್ ಪ್ಲಾಸ್ಟಿಕ್ ಡಬ್ಬದಲ್ಲಿ ಮುಚ್ಚಿಟ್ಟಿದ್ದರು. ನಂತರ ಉರುಗ ಸಂರಕ್ಷಕ ಸೂರ್ಯ ಕೀರ್ತಿಯಿಂದ ಹಾವಿನ ಮರಿ ಸಂರಕ್ಷಣೆ ಮಾಡಲಾಗಿದೆ.
ಲಾಕ್‌ಡೌನ್‌ನಲ್ಲಿ ಮೈಸೂರಿನ ದಟ್ಟಗಳ್ಳಿ ನಿವಾಸದಲ್ಲಿದ್ದ ನಟ ಮಂಡ್ಯ ರಮೇಶ್‌ಗೆ ಶಾಕ್. ಮನೆಗೆ ಬಂದ ಅಪರೂಪದ ಅತಿಥಿ ಹಾವಿನ ಮರಿ. ತೋಳದ ಜಾತಿಯ ವಿಷರಹಿತ ಹಾವಿನ ಮರಿ ಕಂಡು ಭಯಭೀತರಾಗಿದ್ದ ಮಂಡ್ಯ ರಮೇಶ್. ಮಂಡ್ಯ ರಮೇಶ್ ಭಯ ಹೋಗಲಾಡಿಸಿದ ಸೂರ್ಯ ಕೀರ್ತಿ. ಹಾವಿನ ಮರಿಯನ್ನು ಕೈಯಲ್ಲಿ ಹಿಡಿಯುವಂತೆ ಸೂರ್ಯ ಕೀರ್ತಿಗೆ ಮನವಿ. ಅದು ಸಾಧ್ಯ ಇಲ್ಲ 5 ಸಾವಿರ ಪ್ರೇಕ್ಷಕರನ್ನು ಬೇಕಾದರೆ ಪಕ್ಕದಲ್ಲಿರಿಸಿಕೊಳ್ಳುತ್ತೇನೆ. ಹಾವು ಸಾಧ್ಯವೇ ಇಲ್ಲ ಎಂದ ಮಂಡ್ಯ ರಮೇಶ್. ಆದರೂ ಪಟ್ಟು ಬಿಡದ ಸೂರ್ಯ ಕೀರ್ತಿ. ಇದು ವಿಷರಹಿತ ಹಾವು ಎಂದು ಧೈರ್ಯ ತುಂಬಿ ಮಂಡ್ಯ ರಮೇಶ್‌ಗೆ ನೀಡಿದ ಸೂರ್ಯ. ನಡುಗುವ ಕೈಯಲ್ಲಿ ಸ್ವಲ್ಪ ಹೊತ್ತು ಹಾವಿನ ಮರಿಯನ್ನು ಅಂಗೈನಲ್ಲಿ ಇಟ್ಟುಕೊಂಡ ಮಂಡ್ಯ ರಮೇಶ್.
(Snake rescued from actor mandya ramesh house in Mysuru)