ವೀರಮರಣವನ್ನಪ್ಪಿದ ಕ್ಯಾಪ್ಟನ್ ಎಂವಿ ಪ್ರಾಂಜಲ್ ಗೆ ಸರ್ಕಾರಿ ಗೌರವದೊಂದಿಗೆ ವಿದಾಯ, ನಿಲ್ಲದ ಹೆತ್ತವರ ಕಣ್ಣೀರು
ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆಯನ್ನು ನುಡಿಸುವಾಗ ಪ್ರಾಂಜಲ್ ತಂದೆತಾಯಿ, ಕುಟುಂಬದ ಸದಸ್ಯರು, ಆಪ್ತರು, ಗೆಳೆಯರು ಮತ್ತು ಅಂತಿಮ ನಮನ ಸಲ್ಲಿಸಲು ಬಂದಿದ್ದ ಸಾವಿರಾರು ಜನ ಸೆಲ್ಯೂಟ್ ಮಾಡಿದರು. ತಂದೆ ತಾಯಿಯ ಕಣ್ಣುಗಳಿಂದ ನೀರು ಸುರಿಯುತ್ತಲೇ ಇದೆ. ಅದು ನಿಲ್ಲದು.
ಬೆಂಗಳೂರು: ಬುಧವಾರದಂದು ಜಮ್ಮುವಿನ ರಜೌರಿಯಲ್ಲಿ ಉಗ್ರರ ಗುಂಡಿಗೆ ಬಲಿಯಾದ ಕನ್ನಡ ನಾಡಿನ ಹೆಮ್ಮೆಯ ಪುತ್ರ ಕ್ಯಾಪ್ಟನ್ ಎಂವಿ ಪ್ರಾಂಜಲ್ (Captain MV Pranal) ಪಾರ್ಥೀವ ಶರೀರವನ್ನು ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಸೋಮಸುಂದರ ಚಿತಾಗಾರಕ್ಕೆ ಒಯ್ಯುವ ಮುನ್ನ ಸಕಲ ಮಿಲಿಟರಿ ಮತ್ತು ಸರ್ಕಾರೀ ಗೌರವಗಳನ್ನು (guard of honour) ಸಲ್ಲಿಸಲಾಯಿತು. ದೃಶ್ಯಗಳಲ್ಲಿ ಕರ್ನಾಟಕ ಪೊಲೀಸ್ (Karnataka Police) ಹುತಾತ್ಮನಿಗೆ ಗೌರವ ಸಲ್ಲಿಸುವುದನ್ನು ನೋಡಬಹುದು. ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆಯನ್ನು ನುಡಿಸುವಾಗ ಪ್ರಾಂಜಲ್ ತಂದೆತಾಯಿ, ಕುಟುಂಬದ ಸದಸ್ಯರು, ಆಪ್ತರು, ಗೆಳೆಯರು ಮತ್ತು ಅಂತಿಮ ನಮನ ಸಲ್ಲಿಸಲು ಬಂದಿದ್ದ ಸಾವಿರಾರು ಜನ ಸೆಲ್ಯೂಟ್ ಮಾಡಿದರು. ತಂದೆ ತಾಯಿಯ ಕಣ್ಣುಗಳಿಂದ ನೀರು ಸುರಿಯುತ್ತಲೇ ಇದೆ. ಅದು ನಿಲ್ಲದು. ಕೇವಲ 29-ವರ್ಷ ವಯಸ್ಸಿನ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸುವ ಪಣ ತೊಟ್ಟಿದ್ದ ಒಬ್ಬ ಬಹಾದ್ದೂರ್ ಮಗನನ್ನು ಅವರು ಕಳೆದುಕೊಂಡಿದ್ದಾರೆ. ತಂದೆತಾಯಿಗಳ ಅಂತಿಮ ಸಂಸ್ಕಾರ ಮಕ್ಕಳು ನೆರವೇರಿಸುವುದು ಪ್ರಕೃತಿ ನಿಯಮ, ಆದರೆ ಇಲ್ಲಿ ಅದು ಉಲ್ಟಾ ಆಗಿದೆ. ಪುತ್ರ ಶೋಕ ನಿರಂತರ ಅಂತ ಹೇಳೋದು ಸುಳ್ಳಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ