AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಬಿಜೆಪಿ ಬಾಗಿಲು ತಟ್ಟಿದ್ದ ಕೆಲ ಕಾಂಗ್ರೆಸಿಗರು!

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಬಿಜೆಪಿ ಬಾಗಿಲು ತಟ್ಟಿದ್ದ ಕೆಲ ಕಾಂಗ್ರೆಸಿಗರು!

Pramod Shastri G
| Edited By: |

Updated on: May 29, 2026 | 12:36 PM

Share

ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನದ ರಾಜೀನಾಮೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಸೂಕ್ಷ್ಮವಾಗಿ ಗಮನಿಸಿತ್ತು. ಬಂಡಾಯದ ಭೀತಿ ಮತ್ತು ರೆಸಾರ್ಟ್ ರಾಜಕೀಯದ ಆತಂಕದಿಂದ ಹೈಕಮಾಂಡ್ ತೀವ್ರ ಒತ್ತಡದಲ್ಲಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಬೆಂಗಳೂರಿಗೆ ಕಳುಹಿಸಿ, ಯಾವುದೇ ಅನಾಹುತಗಳಿಲ್ಲದೆ ಸುಸೂತ್ರವಾಗಿ ಅಧಿಕಾರ ಹಸ್ತಾಂತರ ನಡೆಯುವ ಬಗ್ಗೆ ಹೈಕಮಾಂಡ್ ಎಚ್ಚರಿಕೆ ವಹಿಸಿತ್ತು ಎಂಬುದು ಗೊತ್ತಾಗಿದೆ.

ಬೆಂಗಳೂರು, ಮೇ 29: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ವಿಚಾರವಾಗಿ ವರಿಷ್ಠರಿಗೆ ಕರ್ನಾಟಕ ಕಾಂಗ್ರೆಸ್​​ನಲ್ಲಿ ಬಂಡಾಯದ ಭೀತಿ ಕಾಡಿತ್ತು. ಇದಕ್ಕೆ ಪೂರಕವೆಂಬಂತೆ ಬಿಜೆಪಿ ನಾಯಕರ ಸಂಪರ್ಕಿಸಲು ಕೆಲ ಕಾಂಗ್ರೆಸಿಗರು ಯತ್ನಿಸಿದ್ದ ಸುದ್ದಿ ತಿಳಿದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆಯನ್ನು ಕಾಂಗ್ರೆಸ್​​ ಹೈಕಮಾಂಡ್​​ ಸೂಕ್ಷ್ಮವಾಗಿ ಗಮನಿಸಿತ್ತು. ಮಂಗಳವಾರದ ರಾತ್ರಿಯಿಂದ ಒತ್ತಡದಲ್ಲಿದ್ದ ಹೈಕಮಾಂಡ್ ನಾಯಕರು ಅದಕ್ಕಾಗಿಯೇ ರಣದೀಪ್​ ಸುರ್ಜೇವಾಲ ಅವರನ್ನು ಕರ್ನಾಟಕಕ್ಕೆ ಕಳುಹಿಸಿದ್ದರು. ಕಾಂಗ್ರೆಸ್ ಶಾಸಕರ ಚಲನವಲನದ ಮೇಲೆ ಕಣ್ಣಿಟ್ಟಿಡುವ ಜೊತೆಗೆ ರಾಜೀನಾಮೆ ಬಳಿಕ ಸಿದ್ದರಾಮಯ್ಯರನ್ನು ದೆಹಲಿಗೆ ಕರೆತರುವಂತೆ ಸುರ್ಜೇವಾಲಾಗೆ ಸೂಚನೆ ನೀಡಲಾಗಿತ್ತು. ಅದರಂತೆ ಸಿದ್ದರಾಮಯ್ಯ ಜೊತೆಯಲ್ಲೇ ಸುರ್ಜೇವಾಲ ದೆಹಲಿಗೆ ತೆರಳಿದ್ದರು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Pramod Shastri G
Pramod Shastri G