AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲು ಸೇರಿರೋ ದರ್ಶನ್ ಹೆಸರನ್ನು ಹಾಳು ಮಾಡಲು ನಡೆದಿದೆ ಹುನ್ನಾರ?

ಜೈಲು ಸೇರಿರೋ ದರ್ಶನ್ ಹೆಸರನ್ನು ಹಾಳು ಮಾಡಲು ನಡೆದಿದೆ ಹುನ್ನಾರ?

ರಾಜೇಶ್ ದುಗ್ಗುಮನೆ
|

Updated on: Jul 18, 2024 | 11:40 AM

Share

ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಮಧ್ಯೆ ಕೆಲವು ಅಹಿತಕರ ಘಟನೆಗಳು ನಡೆದಿವೆ. ದರ್ಶನ್ ಹೆಸರನ್ನು ಹಾಳು ಮಾಡಲು ನಡೆದ ಪ್ರಯತ್ನವೇ’ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಅದಕ್ಕೆ ಕಾರಣಗಳು ಏನು ಎಂಬುದಕ್ಕೆ ಇಲ್ಲಿದೆ ಉತ್ತರ.

ದರ್ಶನ್ ಜೈಲು ಸೇರಿದಾಗಿನಿಂದಲೂ ಅವರ ಅಭಿಮಾನಿಗಳು ಚಿಂತೆಗೆ ಒಳಗಾಗಿದ್ದಾರೆ. ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಮಧ್ಯೆ ಕೆಲವು ಅಹಿತಕರ ಘಟನೆಗಳು ನಡೆದಿವೆ. ಜೈಲು ಎದುರಲ್ಲಿ ದರ್ಶನ್ ಅಭಿಮಾನಿಗಳು ಕೂಗಾಟ ಮಾಡಿದ್ದು ಇದೆ. ಮಾಧ್ಯಮದವರ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆದಿದೆ. ಪ್ರಸನ್ನ ಥಿಯೇಟರ್​ನಲ್ಲಿ ಕೆಲವರು ದರ್ಶನ್ ಖೈದಿ ಸಂಖ್ಯೆ ಹಾಕಿ ಪುಂಡಾಟ ಮೆರೆದಿದ್ದಾರೆ. ‘ಇವರು ಯಾರೂ ದರ್ಶನ್ ಅಭಿಮಾನಿಗಳೇ ಅಲ್ಲವೇ? ದರ್ಶನ್ ಹೆಸರನ್ನು ಹಾಳು ಮಾಡಲು ನಡೆದ ಪ್ರಯತ್ನವೇ’ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ ದರ್ಶನ್ ಬಾಲ್ಯದ ಗೆಳೆಯ ಶಿವಕುಮಾರ್ ನೀಡಿದ ಹೇಳಿಕದೆ. ‘ಪ್ರಸನ್ನ ಥಿಯೇಟರ್ ಬಳಿ ಆದ ಘಟನೆ ಕೇಳಿದ್ದೆನೆ. ವಿಚಾರಿಸಿದಾಗ ಅವರು ಯಾರೂ ನಮ್ಮವರಲ್ಲ ಅನ್ನೋದು ಗೊತ್ತಾಯಿತು. ಫ್ಯಾನ್ಸ್ ದರ್ಶನ್ ಈಚೆ ಬಂದ್ರೆ ಸಾಕು ಅನ್ನೋ ರೀತಿಯಲ್ಲಿ ಇದ್ದಾರೆ. ಪೂಜೆ-ಪುನಸ್ಕಾರ ಮಾಡಿಕೊಂಡಿದ್ದಾರೆ. ಈ ರೀತಿಯ ಕೆಲಸಗಳಿಗೆ ಅವರು ಕೈ ಹಾಕುತ್ತಿಲ್ಲ’ ಎಂದಿದ್ದಾರೆ ಶಿವಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.