ವಿಜಯಪುರ: ಮೊಹರಂ ವೇಳೆ ವಿಶಿಷ್ಟ ಆಚರಣೆ, ಸೀರೆ ತೊಟ್ಟ ಪುರುಷರು ನುಡಿತಾರೆ ಮಳೆ, ಬೆಳೆಯ ಭವಿಷ್ಯ

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಡಗಲಿ ಗ್ರಾಮದಲ್ಲಿ ಮೊಹರಂ ಹಬ್ಬದ ವೇಳೆ ಮಳೆ, ಬೆಳೆಗಳ ಭವಿಷ್ಯ ಕೇಳುವ ವಿಶಿಷ್ಟ ಆಚರಣೆ ಇಲ್ಲಿ ನಡೆದಿದೆ. ಇಲ್ಲಿ ಪುರುಷರು ಸೀರೆಯುಟ್ಟು ಮಳೆ, ಬೆಳೆಗಳ ಭವಿಷ್ಯ ಕೇಳುವ ಪದ್ದತಿ ರೂಢಿಯಲ್ಲಿದೆ. ಈ ಭವಿಷ್ಯದ ಆಧಾರದ ಮೇಲೆ ಈ ಭಾಗದ ರೈತರು ಬೆಳೆಗಳ ಬಿತ್ತನೆ ಮಾಡುತ್ತಾರೆ.

ವಿಜಯಪುರ: ಮೊಹರಂ ವೇಳೆ ವಿಶಿಷ್ಟ ಆಚರಣೆ, ಸೀರೆ ತೊಟ್ಟ ಪುರುಷರು ನುಡಿತಾರೆ ಮಳೆ, ಬೆಳೆಯ ಭವಿಷ್ಯ
| Updated By: ಆಯೇಷಾ ಬಾನು

Updated on: Jul 18, 2024 | 12:47 PM

ವಿಜಯಪುರ, ಜುಲೈ.18: ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಹಬ್ಬ (Muharram) ಆಚರಣೆಯು ಎಲ್ಲೆಡೆ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ಅದರಲ್ಲೂ ವಿಜಯಪುರ (Vijayapura) ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಡಗಲಿ ಗ್ರಾಮದಲ್ಲಿ ಈ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗಿದೆ. ಮೊಹರಂ ಹಬ್ಬದ ವೇಳೆ ಮಳೆ, ಬೆಳೆಗಳ ಭವಿಷ್ಯ ಕೇಳುವ ವಿಶಿಷ್ಟ ಆಚರಣೆ ಇಲ್ಲಿ ನಡೆದಿದೆ. ಇಲ್ಲಿ ಪುರುಷರು ಸೀರೆಯುಟ್ಟು ಮಳೆ, ಬೆಳೆಗಳ ಭವಿಷ್ಯ ಕೇಳುವ ಪದ್ದತಿ ರೂಢಿಯಲ್ಲಿದೆ.

ಅನಾದಿ ಕಾಲದಿಂದಲೂ ಮೊಹರಂ ಜಾಗರಣೆ ವೇಳೆ ಭವಿಷ್ಯ ಕೇಳುವ ಆಚರಣೆಯನ್ನು ಇಲ್ಲಿನ ಜನ ಮಾಡಿಕೊಂಡು ಬಂದಿದ್ದಾರೆ. ಓರ್ವ ವ್ಯಕ್ತಿಯನ್ನು ಬುಟ್ಟಿಯಲ್ಲಿ ಕೂರಿಸಲಾಗುತ್ತೆ. ಬಳಿಕ ಸೀರೆಯುಟ್ಟ ಪುರುಷರು ಬುಟ್ಟಿಯೊಳಗೆ ಒನಕೆಯನ್ನು ಇಟ್ಟು ವ್ಯಕ್ತಿಯ ಸಮೇತ ಬುಟ್ಟಿಯನ್ನು ಮೇಲೆತ್ತುತ್ತಾರೆ. ಮೇಲೆತ್ತಿ ಕೆಳಗಿಳಿಸಿ ಭವಿಷ್ಯ ನುಡಿಯುತ್ತಾರೆ. ಮಳೆ, ಬೆಳೆಗಳ ಹೆಸರಿನಲ್ಲಿ ಬುಟ್ಟಿಯನ್ನು ಮೇಲೆತ್ತಲಾಗುತ್ತೆ. ವ್ಯಕ್ತಿ ಕುಳಿತಿರುವ ಬುಟ್ಟಿ ಸುಲಭವಾಗಿ ಮೇಲೆ ಎತ್ತಲಾದರೆ ಮಳೆ ಬೆಳೆ ಉತ್ತಮವಾಗಿ ಆಗುತ್ತೆ ಎಂದು ಅರ್ಥ. ಬುಟ್ಟಿ ಮೇಲೆತ್ತಲು ಕಷ್ಟವಾದರೆ ಮಳೆ ಬೆಳೆ ಸರಿಯಾಗಿ ಆಗಲ್ಲಾ ಎಂದು ಅರ್ಥ. ಈ ಭವಿಷ್ಯದ ಆಧಾರದ ಮೇಲೆ ಈ ಭಾಗದ ರೈತರು ಬೆಳೆಗಳ ಬಿತ್ತನೆ ಮಾಡುತ್ತಾರೆ. ನಿನ್ನೆ ತಡರಾತ್ರಿ ಈ ವಿಶೇಷ ಪದ್ದತಿಯ ಆಚರಣೆ ನಡೆದಿದ್ದು ಇಲ್ಲಿನ ಜನರು ಇದನ್ನು ನಂಬುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us
ಕ್ರೀಡಾಕೂಟ ವೇಳೆ ಹೆಜ್ಜೇನು ದಾಳಿ: 40ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
ಕ್ರೀಡಾಕೂಟ ವೇಳೆ ಹೆಜ್ಜೇನು ದಾಳಿ: 40ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
ದರ್ಶನ್ ಫೋಟೋ ಹೊರಬೀಳದಿದ್ದರೆ ಕೈದಿಗಳ ಐಷಾರಾಮಿ ಬದುಕು ಮುಂದುವರಿಯುತ್ತಿತ್ತು
ದರ್ಶನ್ ಫೋಟೋ ಹೊರಬೀಳದಿದ್ದರೆ ಕೈದಿಗಳ ಐಷಾರಾಮಿ ಬದುಕು ಮುಂದುವರಿಯುತ್ತಿತ್ತು
ಎಲ್ಲ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುತ್ತದೆ: ನಿಖಿಲ್
ಎಲ್ಲ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುತ್ತದೆ: ನಿಖಿಲ್
ಮುಂಬೈ ಸಮೀಪದ ವಾಧವನ್ ಪೋರ್ಟ್; ಕೋಟಿ ಜನರಿಗೆ ಉದ್ಯೋಗ ನಿರೀಕ್ಷೆ
ಮುಂಬೈ ಸಮೀಪದ ವಾಧವನ್ ಪೋರ್ಟ್; ಕೋಟಿ ಜನರಿಗೆ ಉದ್ಯೋಗ ನಿರೀಕ್ಷೆ
ಬಿಜೆಪಿ ಮುಖ್ಯಮಂತ್ರಿಗಳೆಲ್ಲ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು: ಶಾಸಕ
ಬಿಜೆಪಿ ಮುಖ್ಯಮಂತ್ರಿಗಳೆಲ್ಲ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು: ಶಾಸಕ
ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ: ಬಿ ದಯಾನಂದ್
ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ: ಬಿ ದಯಾನಂದ್
ಯೋಗೇಶ್ವರ್ ನನ್ನನ್ನು ಸಂಪರ್ಕಿಸಿಲ್ಲ, ಬೇರ ಪಕ್ಷದ ಮಾತು ಬೇಕಿಲ್ಲ: ಡಿಕೆಶಿ
ಯೋಗೇಶ್ವರ್ ನನ್ನನ್ನು ಸಂಪರ್ಕಿಸಿಲ್ಲ, ಬೇರ ಪಕ್ಷದ ಮಾತು ಬೇಕಿಲ್ಲ: ಡಿಕೆಶಿ
‘ಲಾಫಿಂಗ್ ಬುದ್ಧ’ ಗೆಲುವು ಕೋರಿ ರಿಷಬ್ ಶೆಟ್ಟಿ ದಂಪತಿಯಿಂದ ಪೂಜೆ
‘ಲಾಫಿಂಗ್ ಬುದ್ಧ’ ಗೆಲುವು ಕೋರಿ ರಿಷಬ್ ಶೆಟ್ಟಿ ದಂಪತಿಯಿಂದ ಪೂಜೆ
ಮನೆಯೊಳಗೆ ನುಗ್ಗಿದ ಬೃಹತ್ ಗಾತ್ರದ ಮೊಸಳೆ; ವಿಡಿಯೋ ಇಲ್ಲಿದೆ ನೋಡಿ
ಮನೆಯೊಳಗೆ ನುಗ್ಗಿದ ಬೃಹತ್ ಗಾತ್ರದ ಮೊಸಳೆ; ವಿಡಿಯೋ ಇಲ್ಲಿದೆ ನೋಡಿ
ಮನವಿಗೆ ರಾಜ್ಯಪಾಲರು ಸ್ಪಂದಿಸದಿದ್ದರೆ ರಾಷ್ಟ್ರಪತಿಗಳಿಗೆ ಮೊರೆ: ಪರಮೇಶ್ವರ್
ಮನವಿಗೆ ರಾಜ್ಯಪಾಲರು ಸ್ಪಂದಿಸದಿದ್ದರೆ ರಾಷ್ಟ್ರಪತಿಗಳಿಗೆ ಮೊರೆ: ಪರಮೇಶ್ವರ್