ಮದುವೆ ಬಳಿಕವೂ ಚಿತ್ರರಂಗದಲ್ಲಿ ಸೋನಲ್ ಬ್ಯುಸಿ; ಇದರ ಕ್ರೆಡಿಟ್ ತರುಣ್​ಗೆ

Updated on: Jun 02, 2025 | 10:18 AM

ಮದುವೆ ಆದ ಬಳಿಕ ಅನೇಕ ಹೀರೋಯಿನ್​ಗಳು ಸಿನಿಮಾ ಮಾಡಿಲ್ಲ. ಇದಕ್ಕೆ ಕಾರಣ ಮನೆಯ ಜವಾಬ್ದಾರಿ. ಆದರೆ ಕೆಲವೇ ಹೀರೋಯಿನ್​ಗಳು ವಿವಾಹದ ಬಳಿಕವೂ ಸಿನಿಮಾ ರಂಗದಲ್ಲಿ ಮುಂದುವರಿಯುತ್ತಿದ್ದಾರೆ. ಈ ಬಗ್ಗೆ ಶ್ರುತಿ ಅವರು ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಲವು ನಟಿಯರು ಮದುವೆ ಬಳಿಕ ಸಿನಿಮಾ ರಂಗ ತೊರೆಯುತ್ತಾರೆ. ಕುಟುಂಬ ಕೆಲಸದಲ್ಲಿ ಅವರು ಬ್ಯುಸಿ ಆಗುತ್ತಾರೆ. ಆದರೆ, ನಟಿ ಸೋನಲ್ (Sonal) ಆ ರೀತಿ ಅಲ್ಲ. ಅವರು ಪತಿ ತರುಣ್ ಸುಧೀರ್ ಬೆಂಬಲದಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಈ ಬಗ್ಗೆ ನಟಿ ಶ್ರುತಿ ಅವರು ಮಾತನಾಡಿದ್ದು, ತರುಣ್ ಅವರಿಗೆ ಧನ್ಯವಾದ ಹೇಳಿದ್ದಾರೆ. ‘ಮದುವೆ ಬಳಿಕ ಮನೆ ಜವಾಬ್ದಾರಿ ಕೊಟ್ಟು ಬಿಡ್ತಾರೆ. ಸೋನಲ್ ಮದುವೆ ಆದಮೇಲೆ ಚಿತ್ರರಂಗದಲ್ಲಿ ಕಲಾವಿದೆ ಆಗಿ ಬೆಳೀಲಿ ಎಂದು ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.