Sonu Srinivas Gowda: ಗುರೂಜಿ ಕಷ್ಟಪಟ್ಟು ಅಡುಗೆ ಮಾಡುವಾಗ ಮೇಕಪ್ ಲೋಕದಲ್ಲಿ ಮುಳುಗಿದ್ದ ಸೋನು ಗೌಡ
Aryavardhan Guruji: ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ನಲ್ಲಿ 6ನೇ ವಾರದವರೆಗೂ ಸಾಗಿ ಬಂದಿದ್ದಾರೆ. 8 ಜನರ ನಡುವೆ ಈಗ ಸ್ಪರ್ಧೆ ಮುಂದುವರಿದಿದೆ.
ಬಿಗ್ ಬಾಸ್ ಕನ್ನಡ ಒಟಿಟಿ (Bigg Boss Kannada OTT) ಶೋನಲ್ಲಿ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಫಿನಾಲೆಗಾಗಿ ವೀಕ್ಷಕರು ಕಾದಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 8 ಮಂದಿ ಉಳಿದುಕೊಂಡಿದ್ದಾರೆ. ಸೋನು ಶ್ರೀನಿವಾಸ್ ಗೌಡ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ, ಜಶ್ವಂತ್ ಬೋಪಣ್ಣ, ಆರ್ಯವರ್ಧನ್ ಗುರೂಜಿ (Aryavardhan Guruji) ನಡುವೆ ಪೈಪೋಟಿ ಮುಂದುವರಿದಿದೆ. ಆರ್ಯವರ್ಧನ್ ಹೆಚ್ಚು ಕಾಲ ಅಡುಗೆ ಕೆಲಸದಲ್ಲಿ ಬ್ಯುಸಿ ಆಗುತ್ತಾರೆ. ಅವರು ಅಡುಗೆ ಮಾಡುವಾಗ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಮೇಕಪ್ ಲೋಕದಲ್ಲಿ ಮುಳುಗಿದ್ದರು. ದೂರವೇ ಕುಳಿತು ಗುರೂಜಿ ಜತೆ ಅವರು ವಾದ ಮಾಡುತ್ತಿದ್ದರು. ಆ ವಿಡಿಯೋ ಇಲ್ಲಿದೆ..
Published on: Sep 13, 2022 01:42 PM