ಅವರು ಕೊಟ್ಟ ಟಾರ್ಚರ್​ನಿಂದಲೇ ಸೌಂದರ್ಯ ಜಗದೀಶ್ ಆತ್ಮಹತ್ಯೆ: ಪತ್ನಿ ಆರೋಪ

ಅವರು ಕೊಟ್ಟ ಟಾರ್ಚರ್​ನಿಂದಲೇ ಸೌಂದರ್ಯ ಜಗದೀಶ್ ಆತ್ಮಹತ್ಯೆ: ಪತ್ನಿ ಆರೋಪ

ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:May 25, 2024 | 1:05 PM

ಏಪ್ರಿಲ್ 14ರಂದು ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನ ಹೊಂದಿದ್ದರು. ಇದೀಗ ಅವರ ಪತ್ನಿ ರೇಖಾ, ಸೌಂದರ್ಯ ಜಗದೀಶ್ ಸಾವಿಗೆ ಅವರ ಪಾಲುದಾರರೇ ಕಾರಣ ಎಂದು ಆರೋಪ ಮಾಡಿದ್ದಾರೆ. ಸೌಂದರ್ಯ ಜಗದೀಶ್ ಬರೆದಿರುವ ಡೆತ್ ನೋಟ್ ಸಿಕ್ಕಿದೆ ಎಂದು ಸಹ ಹೇಳಿದ್ದಾರೆ.

ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಉದ್ಯಮದಲ್ಲಿ ಆದ ನಷ್ಟದಿಂದಲೇ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಇಂದು (ಮೇ 24) ಸೌಂದರ್ಯ ಜಗದೀಶ್ ಅವರ ಪತ್ನಿ ಸುದ್ದಿಗೋಷ್ಠಿ ಕರೆದು ಮಾತನಾಡಿ ಸೌಂದರ್ಯ ಜಗದೀಶ್ ಅವರ ಪಾಲುದಾರರು ಕೆಲವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಸೌಂದರ್ಯ ಜಗದೀಶ್ ಅವರ ಉದ್ಯಮ ಪಾಲುದಾರರಾಗಿದ್ದ ಸುರೇಶ್, ಹೊಂಬಣ್ಣ, ಸುಧೀಂದ್ರ ಅವರುಗಳು ಪತಿಗೆ ಮೋಸ ಮಾಡಿದ್ದಾರೆ. ಅವರು ನೀಡಿದ ಟಾರ್ಚರ್​ನಿಂದಾಗಿಯೇ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ರೇಖಾ ಆರೋಪ ಮಾಡಿದ್ದಾರೆ. ಸೌಂದರ್ಯ ಜಗದೀಶ್ ಬರೆದಿರುವ ಡೆತ್ ನೋಟ್ ಸಿಕ್ಕಿದೆ ಎಂದು ರೇಖಾ ಹೇಳಿದ್ದು, ಅದರಲ್ಲಿ ಅವರು ಅವರ ಪಾಲುದಾರರ ವಿರುದ್ಧ ಆರೋಪ ಮಾಡಿದ್ದಾರೆ. ಅದನ್ನೆಲ್ಲ ನಾನು ತನಿಖಾಧಿಕಾರಿಗಳಿಗೆ ಕೊಟ್ಟಿದ್ದೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 24, 2024 07:45 PM