ಜೆಟ್ಲ್ಯಾಗ್ ಮಾರಲು ಮುಂದಾಗಿದ್ದ ಸೌಂದರ್ಯ ಜಗದೀಶ್? ಮಾಡಿಕೊಂಡ ಲಾಸ್ ಅಷ್ಟಿಷ್ಟಲ್ಲ
SBI ಹಾಗೂ IDBI ಬ್ಯಾಂಕ್ನಿಂದ ಸೌಂದರ್ಯ ಜಗದೀಶ್ ಕೊಟ್ಯಾಂತರ ರೂಪಾಯಿ ಸಾಲ ಪಡೆದಿದ್ದರಂತೆ. ಇದೇ ಸಾಲದ ಹಣವನ್ನು ಬಿಸಿನೆಸ್ನಲ್ಲಿ ಹಾಕಿ ಕೈಸುಟ್ಟುಕೊಂಡಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇತ್ತೀಚೆಗೆ SBI ಬ್ಯಾಂಕ್ನವರು ನೊಟೀಸ್ ನೀಡಿ ಅವರಿಗೆ ಸಂಬಂಧಿಸಿದ ಐದು ಪ್ರಾಪರ್ಟಿ ಸೀಜ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಉದ್ಯಮಿ, ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉದ್ಯಮದಲ್ಲಿ ಅವರು ನಷ್ಟು ಅನುಭವಿಸಿದ್ದರು ಎನ್ನಲಾಗಿದೆ. ದೂರು ಕೊಡುವಾಗ ಕುಟುಂಬಸ್ಥರು ಆತ್ಮಹತ್ಯೆ ವಿಚಾರದಲ್ಲಿ ಗುಟ್ಟುಬಿಟ್ಟುಕೊಟ್ಟಿಲ್ಲ. ಇದರಿಂದ ಪೊಲೀಸರಿಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಹೀಗಾಗಿ, ಮೂರು ಆಯಾಮದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೌಂದರ್ಯ ಜಗದೀಶ್ ಬಿಸ್ನೆಸ್ ಪಾಲುದಾರರ ಮೇಲೂ ಅನುಮಾನ ಮೂಡಿದೆ.
ರಿಯಲ್ ಎಸ್ಟೇಟ್
‘ಸೌಂದರ್ಯ ಕನ್ಸಟ್ರಕ್ಷನ್ಸ್’ ಹೆಸರಿನಲ್ಲಿ ಸೌಂದರ್ಯ ಜಗದೀಶ್ ಕಂಪನಿ ಆರಂಭಿಸಿದ್ದರು. ಕೋವಿಡ್ಗೂ ಮುನ್ನ ಈ ಕಂಪನಿ ಆರಂಭ ಆಗಿತ್ತು. ಮೂರು ಜನ ಪಾಲುದಾರರು ಸೇರಿ ದೊಡ್ಡ ಮಟ್ಟದಲ್ಲಿ ಲೇಔಟ್ ಹಾಗೂ ಅಪಾರ್ಮೆಂಟ್ ಮಾಡಲು ಮುಂದಾಗಿದ್ದರು. ಇದರಲ್ಲಿ ಸೌಂದರ್ಯ ಜಗದೀಶ್ ಸಾಕಷ್ಟು ಹಣ ಹೂಡಿದ್ದರು. ಆದರೆ, ಕೋವಿಡ್ ಬಳಿಕ ಲಾಸ್ ಆಗಿದ್ದರಿಂದ ಅವರು ಮನನೊಂದಿದ್ದರು ಎನ್ನಲಾಗಿದೆ. ಬಿಸ್ನೆಸ್ ಮಾಡ್ತೀನಿ ಎಂದು ಬಂದವರು ಮೋಸ ಮಾಡಿದರೇ ಎನ್ನುವ ಅನುಮಾನ ಕೂಡ ಮೂಡಿದೆ.
ಭರ್ಜರಿ ಸಾಲ
SBI ಹಾಗೂ IDBI ಬ್ಯಾಂಕ್ನಿಂದ ಸೌಂದರ್ಯ ಜಗದೀಶ್ ಕೊಟ್ಯಾಂತರ ರೂಪಾಯಿ ಸಾಲ ಪಡೆದಿದ್ದರಂತೆ. ಇದೇ ಸಾಲದ ಹಣವನ್ನು ಬಿಸಿನೆಸ್ನಲ್ಲಿ ಹಾಕಿ ಕೈಸುಟ್ಟುಕೊಂಡಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇತ್ತೀಚೆಗೆ SBI ಬ್ಯಾಂಕ್ನವರು ನೊಟೀಸ್ ನೀಡಿ ಅವರಿಗೆ ಸಂಬಂಧಿಸಿದ ಐದು ಪ್ರಾಪರ್ಟಿ ಸೀಜ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಜೊತೆಗೆ IDBI ಬ್ಯಾಂಕ್ನಿಂದಲೂ ನಿರಂತರ ನೊಟೀಸ್ಗಳು ಬರೋಕೆ ಆರಂಭವಾಗಿತ್ತು ಎನ್ನಲಾಗಿದೆ. ಹೀಗಾಗಿ ಅವರು ಜೆಟ್ಲಾಗ್ ರೆಸ್ಟೋರೆಂಟ್ ಹಾಗೂ ಪಬ್ ಮಾರಾಟಕ್ಕೂ ಮುಂದಾಗಿದ್ದರೂ ಎನ್ನುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಸೌಂದರ್ಯಾ ಇನ್ನಿಲ್ಲ ಅನ್ನೋದು ನಂಬಲಾಗದೇ ರಮೇಶ್ ಅರವಿಂದ್ ಏನು ಮಾಡಿದ್ರು ಗೊತ್ತಾ?
ಮನೆಯಲ್ಲಿ ಗಲಾಟೆ
ರೆಸ್ಟೋಬಾರ್ ಮಾರುವ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಅವರು ಸಾಕಷ್ಟು ಮನನೊಂದಿದ್ದರು. ಗನ್ಮ್ಯಾನ್ ಹಾಗೂ ಅತ್ತೆ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಇತ್ತು. ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಗನ್ ಮ್ಯಾನ್ ತೀರಿಹೋದರೆ, ಅತ್ತೆ ಕೂಡ ಕೆಲ ದಿನಗಳ ಹಿಂದೆ ನಿಧನ ಹೊಂದಿದ್ದರು. ಇದು ಅವರನ್ನು ಬಹುವಾಗಿ ಕಾಡಿತ್ತು. ಇತ್ತೀಚೆಗೆ ಸೌಂದರ್ಯ ಜಗದೀಶ್ ಆರೋಗ್ಯದಲ್ಲೂ ಸಮಸ್ಯೆ ಎದುರಾಗಿತ್ತು. ಇವೆಲ್ಲವೂ ಆತ್ಮಹತ್ಯೆಗೆ ಕಾರಣ ಆಗಿರಬಹುದು ಅನ್ನೋದು ಪೊಲೀಸರ ಅನುಮಾನ. ಸದ್ಯ ಮೂರು ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:34 am, Tue, 16 April 24