ನಟಿ ಸೌಂದರ್ಯಾ ಇನ್ನಿಲ್ಲ ಅನ್ನೋದು ನಂಬಲಾಗದೇ ರಮೇಶ್ ಅರವಿಂದ್ ಏನು ಮಾಡಿದ್ರು ಗೊತ್ತಾ?
ಜೀ ಕನ್ನಡದಲ್ಲಿ ಹಲವು ರೀತಿಯ ರಿಯಾಲಿಟಿ ಶೋಗಳು ಪ್ರಸಾರ ಕಂಡಿವೆ. ಈಗ ‘ಮಹಾನಟಿ’ ಹೆಸರಿನ ರಿಯಾಲಿಟಿ ಶೋ ಪ್ರಸಾರ ಕಾಣುತ್ತಿದೆ. ಈ ಕಾರ್ಯಕ್ರಮದ ಮೂಲಕ ನಟನಾ ಪ್ರತಿಭೆಯನ್ನು ಜಗತ್ತಿಗೆ ತೋರಿಸುವ ಕೆಲಸ ಆಗುತ್ತಿದೆ. ನಟ, ನಿರ್ದೇಶಕ ರಮೇಶ್ ಅರವಿಂದ್ ಜಡ್ಜ್ ಆಗಿದ್ದಾರೆ. ರಮೇಶ್ ಅರವಿಂದ್ ಅವರು ವೇದಿಕೆ ಮೇಲೆ ಸೌಂದರ್ಯ ಅವರನ್ನು ನೆನಪಿಸಿಕೊಂಡಿದ್ದಾರೆ.
ರಮೇಶ್ ಅರವಿಂದ್, ವಿಷ್ಣುವರ್ಧನ್ ಹಾಗೂ ಸೌಂದರ್ಯಾ ಅವರು ‘ಆಪ್ತಮಿತ್ರ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದರು. ಗಂಗಾಳ (ಸೌಂದರ್ಯ) ಪತಿಯ ಪಾತ್ರದಲ್ಲಿ ರಮೇಶ್ ಅರವಿಂದ್ ನಟಿಸಿದ್ದರು. ಈ ಸಿನಿಮಾ ಆಗಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಸೌಂದರ್ಯಾ ನಟನೆ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ಸೌಂದರ್ಯಾ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟರು ಎನ್ನುವ ವಿಚಾರವನ್ನು ರಮೇಶ್ ಅರವಿಂದ್ ಅವರಿಗೆ ನಂಬೋಕೆ ಆಗಿರಲಿಲ್ಲವಂತೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ಜೀ ಕನ್ನಡದಲ್ಲಿ ಹಲವು ರೀತಿಯ ರಿಯಾಲಿಟಿ ಶೋಗಳು ಪ್ರಸಾರ ಕಂಡಿವೆ. ಈಗ ‘ಮಹಾನಟಿ’ ಹೆಸರಿನ ರಿಯಾಲಿಟಿ ಶೋ ಪ್ರಸಾರ ಕಾಣುತ್ತಿದೆ. ಈ ಕಾರ್ಯಕ್ರಮದ ಮೂಲಕ ನಟನಾ ಪ್ರತಿಭೆಯನ್ನು ಜಗತ್ತಿಗೆ ತೋರಿಸುವ ಕೆಲಸ ಆಗುತ್ತಿದೆ. ನಟ, ನಿರ್ದೇಶಕ ರಮೇಶ್ ಅರವಿಂದ್, ಹಿರಿಯ ನಟಿ ಪ್ರೇಮಾ, ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ನಿಶ್ವಿಕಾ ನಾಯ್ಡು ಈ ರಿಯಾಲಿಟಿ ಶೋನ ಜಡ್ಜ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಮೇಶ್ ಅರವಿಂದ್ ಅವರು ವೇದಿಕೆ ಮೇಲೆ ಸೌಂದರ್ಯ ಅವರನ್ನು ನೆನಪಿಸಿಕೊಂಡಿದ್ದಾರೆ.
‘ಆಪ್ತಮಿತ್ರ ಸಿನಿಮಾ ಮಾಡ್ತಾ ಇದ್ದೆ. ಕ್ಲೈಮ್ಯಾಕ್ಸ್ ದೃಶ್ಯದ ಶೂಟ್ ಮಾಡಲಾಗುತ್ತಿತ್ತು. ರಂಗೋಲಿಯಲ್ಲಿ ಮಂಡಲ ಹಾಕಲಾಗಿತ್ತು. ಸೌಂದರ್ಯಾ ಆ್ಯಕ್ಟಿಂಗ್ ಮಾಡ್ತಾ ಇದ್ರು. ನಾಗವಲ್ಲಿ ಒಳಗೆ ಬಂದು ಬಿಟ್ಟಿದಾಳೆ ಅನಿಸ್ತಾ ಇತ್ತು. ಡಿಸ್ಟರ್ಬ್ ಮಾಡದೇ ಅಲ್ಲಿಂದ ಬಂದು ಬಿಟ್ಟೆವು. ಅವರು ಅಷ್ಟು ಒಳಗೆ ಹೋಗಿ ನಟನೆ ಮಾಡುತ್ತಿದ್ದರು. ಅವರಿಗೆ ಕ್ಲಾಸ್ಟೋಫೋಬಿಯಾ ಇತ್ತಂತೆ. ಸಣ್ಣ ಲಿಫ್ಟ್, ಸಣ್ಣ ಮನೆಯಲ್ಲಿ ಇರೋಕೆ ಆಗುತ್ತಿರಲಿಲ್ಲವಂತೆ. ಅವಳು ಹೇಗೆ ಆ ಸಣ್ಣ ವಿಮಾನದಲ್ಲಿ ಕೂಳಿತರು ಅನ್ನೋದೆ ಪ್ರಶ್ನೆ’ ಎಂದಿದ್ದಾರೆ ರಮೇಶ್ ಅರವಿಂದ್.
‘ನಾನು ಪಂಚತಂತ್ರಂ ಸಿನಿಮಾ ಶೂಟ್ ಮಾಡುತ್ತಿದ್ದೆ. ಅವಳು ಸತ್ತಿದ್ದಾಳೆ ಅನ್ನೋ ಸುದ್ದಿ ಬರ್ತಾ ಇತ್ತು. ನನಗೆ ನಂಬೋಕೆ ಆಗ್ತಿಲ್ಲ. ನಾನು ಮತ್ತೆ ಮತ್ತೆ ಅವಳಿಗೆ ಕರೆ ಮಾಡ್ತಾ ಇದ್ದೆ. ಇದು ಸುಳ್ಳು, ಅವಳು ಫೋನ್ ಎತ್ತುತ್ತಾಳೆ ಎಂದು ನಾನು ಪದೇ ಪದೇ ಕರೆ ಮಾಡಿದೆ. ಆದರೆ, ಯಾವುದೇ ರೆಸ್ಪಾನ್ಸ್ ಬಂದಿಲ್ಲ’ ಎಂದಿದ್ದಾರೆ ರಮೇಶ್ ಅರವಿಂದ್.
View this post on Instagram
ಸೌಂದರ್ಯಾ ಸತ್ತಿದ್ದು ಹೇಗೆ?
ಕನ್ನಡತಿ ಸೌಂದರ್ಯಾ 1992ರಲ್ಲಿ ‘ಬಾ ನನ್ನ ಪ್ರೀತಿಸು’ ಹೆಸರಿನ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಸೌಂದರ್ಯಾ ಆಗಿನ ಕಾಲಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದರು. ಸಿನಿಮಾಕ್ಕಾಗಿ ಎಂಬಿಬಿಎಸ್ ಓದನ್ನು ಅರ್ಧದಲ್ಲೇ ಬಿಟ್ಟು ಬಂದಿದ್ದರು. ಚಿತ್ರರಂಗದಲ್ಲಿ ಅವರು ಇದ್ದಿದ್ದು 12 ವರ್ಷ. ಆ ಸಂದರ್ಭದಲ್ಲಿ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು.
ಇದನ್ನೂ ಓದಿ: ಸೌಂದರ್ಯಾ ಜನ್ಮದಿನ: ‘ದ್ವೀಪ’ದಿಂದ ‘ಆಪ್ತಮಿತ್ರ’ವರೆಗೆ ಅದ್ಭುತ ನಟನೆ ತೋರಿದ ನಟಿಯ ಮರೆಯೋದುಂಟೆ?
ರಾಜಕೀಯದಲ್ಲಿಯೂ ಸೌಂದರ್ಯಾ ಆಸಕ್ತಿ ಬೆಳೆಸಿಕೊಂಡಿದ್ದರು. 2004ರಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದರು. ಈಗಿನ ತೆಲಂಗಾಣದ ಕರೀಂನಗರದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಬೇಕಿತ್ತು. ಹೀಗಾಗಿ 2004ರ ಜುಲೈ 7ರಂದು ಬೆಂಗಳೂರಿನಿಂದ ಲಘು ವಿಮಾನದಲ್ಲಿ ಅವರು ಹೊರಟರು. ವಿಮಾನ ವಿಮಾನ ಟೇಕ್ಆಫ್ ಕೆಲವೇ ನಿಮಿಷದಲ್ಲಿ ಉರಿದು ನೆಲಕ್ಕೆ ಅಪ್ಪಳಿಸಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Mon, 15 April 24