ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ

Updated on: May 01, 2025 | 10:54 PM

ನಟ ದರ್ಶನ್ ಅವರು ಜೈಲಿನಿಂದ ಬಂದ ಬಳಿಕ ಶಶಿರೇಖಾ ಕುಟುಂಬದವರನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದಾರೆ. ಆ ಬಗ್ಗೆ ಇಂದು (ಮೇ 1) ಶಶಿರೇಖಾ ಮಾತನಾಡಿದ್ದಾರೆ. ಆದರೆ ಪವಿತ್ರಾ ಗೌಡ ಅವರ ಹಣಕಾಸಿನ ವ್ಯವಹಾರದ ಬಗ್ಗೆ ಕೇಳಿದ ಪ್ರಶ್ನೆಗೆ ಶಶಿರೇಖಾ ಅವರು ಉತ್ತರ ನೀಡಿಲ್ಲ.

ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ನಿಧನರಾಗಿ ಒಂದು ವರ್ಷ ಕಳೆದಿದೆ. ಇಂದು (ಮೇ 1) ಕುಟುಂಬದವರು ಮೊದಲ ವರ್ಷದ ಪುಣ್ಯ ತಿಥಿ ನೆರವೇರಿಸಿದ್ದಾರೆ. ಈ ವೇಳೆ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಜಗದೀಶ್ ಅವರಿಗೆ ದರ್ಶನ್ (Darshan) ಕೂಡ ಆಪ್ತರಾಗಿದ್ದರು. ಪವಿತ್ರಾ ಗೌಡ (Pavithra Gowda) ಅವರಿಗೆ ಜಗದೀಶ್ ಅವರು ಕೋಟ್ಯಂತರ ರೂಪಾಯಿ ಹಣ ನೀಡಿದ್ದರು ಎಂಬ ಮಾಹಿತಿ ಕೂಡ ಇದೆ. ಆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಶಶಿರೇಖಾ ನಿರಾಕರಿಸಿದ್ದಾರೆ. ‘ಇಂದು ಆ ಬಗ್ಗೆ ಮಾತನಾಡುವುದು ಬೇಡ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.