South Africa vs India: ಟೆಸ್ಟ್ ಸರಣಿ ಬಳಿಕ ಇದೀಗ ಏಕದಿನ ಸರಣಿ ಸೋಲು: ವೈಟ್​ವಾಷ್​ನಿಂದ ಪಾರಾಗುತ್ತಾ ಭಾರತ?

| Updated By: Vinay Bhat

Updated on: Jan 22, 2022 | 10:29 AM

ಬ್ಯಾಟಿಂಗಿಗೆ ಉತ್ತಮ ನೆರವು ನೀಡುತ್ತಿದ್ದ ಟ್ರ್ಯಾಕ್ ನಲ್ಲಿ ಭಾರತ 6 ವಿಕೆಟಿಗೆ 287 ರನ್‌ ಗಳಿಸಿದರೆ, ಇದನ್ನು ನಿರಾಯಾಸವಾಗಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 48.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 288 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಸಂಘಟಿತ ಹೋರಾಟದ ಎದುರು ಸಂಪೂರ್ಣ ಮಂಕಾದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲೂ 7 ವಿಕೆಟ್‌ಗಳಿಂದ ಸೋಲು ಕಂಡಿತು. ಜೆ.ಮಲಾನ್‌ (91) ಹಾಗೂ ಕ್ವಿಂಟನ್‌ ಡಿ ಕಾಕ್‌(78) ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಗೆದ್ದು ಬೀಗಿದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಓಡಿಐ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ಟೆಸ್ಟ್ ಸರಣಿ ಸೋಲಿಗೆ ಪ್ರತಿಕಾರವಾಗಿ ಏಕದಿನ ಸರಣಿ ಗೆಲುವಿನ ಹಂಬಲದಲ್ಲಿದ್ದ ರಾಹುಲ್ ದ್ರಾವಿಡ್ ಮಾರ್ಗದರ್ಶನದ ತಂಡಕ್ಕೆ 2022ರ ಮೊದಲ ತಿಂಗಳಲ್ಲೇ ಸತತ 2 ಸರಣಿ ಸೋಲಿನ ನಿರಾಸೆ ಎದುರಾಯಿತು. ಬ್ಯಾಟಿಂಗಿಗೆ ಉತ್ತಮ ನೆರವು ನೀಡುತ್ತಿದ್ದ ಟ್ರ್ಯಾಕ್ ನಲ್ಲಿ ಭಾರತ 6 ವಿಕೆಟಿಗೆ 287 ರನ್‌ ಗಳಿಸಿದರೆ, ಇದನ್ನು ನಿರಾಯಾಸವಾಗಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 48.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 288 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಶಿಖರ್ ಧವನ್ ಜೊತೆ ನಾಯಕ ಕೆಎಲ್ ರಾಹುಲ್ ಮೊದಲ ವಿಕೆಟ್‌ ಜೊತೆಯಾಟದಲ್ಲಿ63 ರನ್ ಸೇರಿಸಲು ಕಾರಣರಾದರು. ರಿಷಭ್ ಪಂತ್ ರಾಹುಲ್ ಜೊತೆಗೂಡಿದ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 115 ಸೇರಿಸಿದರು. ಭಾರತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 287 ರನ್​ ಕಲೆಹಾಕಿತು. ಆದರೆ, ಈ ಮೊತ್ತ ಹರಿಣಗಳಿಗೆ ಸವಾಲಾಗಲೇ ಇಲ್ಲ. ಗೆಲ್ಲಲು 288 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ 48.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತು.

KL Rahul: ಪಂದ್ಯ ಮುಗಿದ ಬಳಿಕ ಬೇಸರದಲ್ಲಿ ನಾಯಕ ಕೆಎಲ್ ರಾಹುಲ್ ಆಡಿದ ಮಾತು ಕೇಳಿ

KL Rahul: ದಾಖಲೆಯ ಮೊತ್ತಕ್ಕೆ ಕೆಎಲ್ ರಾಹುಲ್​ರನ್ನು ಖರೀದಿಸಿದ ಲಖನೌ: ಹಾರ್ದಿಕ್ ಕೂಡ ಸೇಲ್