ದೇಶದ ಸಾರ್ವಭೌಮತೆ ಅತಿ ಮುಖ್ಯ, ಉತ್ತರ ಭಾರತ, ದಕ್ಷಿಣ ಭಾರತ ಅಂತೆಲ್ಲ ಕೇಳಲಾಗಲ್ಲ, ನಮ್ಮದು ಒಕ್ಕೂಟ ವ್ಯವಸ್ಥೆ: ಸಿದ್ದರಾಮಯ್ಯ
ತೆರಿಗೆ ಹಣ ಹಂಚಿಕೆ ವಿಷಯಕ್ಕೆ ಬಂದರೆ, ತೆರಿಗೆಗಳಿಂದ ಸಂಗ್ರಹವಾಗುವ ಅತಿಹೆಚ್ಚು ಮೊತ್ತವನ್ನು ಕೇಂದ್ರಕ್ಕೆ ಸಲ್ಲಿಸುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದ ಸಿದ್ದರಾಮಯ್ಯ, ರಾಜ್ಯಕ್ಕೆ ಸಿಗುತ್ತಿರುವ ಪಾಲು ಬಹಳ ಕಡಿಮೆಯಾಗಿದೆ ಎಂದರು.
ಬೆಂಗಳೂರು: ರಾಜ್ಯಗಳಿಗೆ ಕೇಂದ್ರದಿಂದ ಬಿಡುಗಡೆಯಾಗುವ ಅನುದಾನದ ಹಂಚಿಕೆಯಲ್ಲಿ ತೀವ್ರ ಸ್ವರೂಪದ ತಾರತಮ್ಯ ಆಗುತ್ತಿದೆ, ಈ ಹಿನ್ನೆಲೆಯಲ್ಲಿ ಪ್ರತ್ಯೇಕ ದಕ್ಷಿಣ ಭಾರತ ರಾಷ್ಟ್ರಕ್ಕಾಗಿ (independent South India) ಕೂಗು ಕೇಳಿಬಂದರೆ ಆಶ್ಚರ್ಯವಿಲ್ಲ ಎಂದು ಡಿಕೆ ಸುರೇಶ್ (DK Suresh) ಹೇಳಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಪ್ಪು ಅಂತ ಹೇಳಿ ಹಾಗೆಲ್ಲ ಹೇಳಬಾರದು ಎಂದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ ಭವನದಲ್ಲಿ ಮಂಡಿಸಿದ ಬಜೆಟ್ ಕುರಿತು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಸಿದ್ದರಾಮಯ್ಯ, ದೇಶದ ಸಾರ್ವಭೌಮ್ಯತೆ ಅತಿ ಮುಖ್ಯವಾದದ್ದು, ನಾವು ಒಕ್ಕೂಟ ವ್ಯವಸ್ಯೆಯನ್ನು ಒಪ್ಪಿಕೊಂಡಿರುವುದರಿಂದ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಮುಂದೆ ಬೇಡಿಕೆಗಳನ್ನಿಡುತ್ತವೆ ಎಂದರು.
ತೆರಿಗೆ ಹಣ ಹಂಚಿಕೆ ವಿಷಯಕ್ಕೆ ಬಂದರೆ, ತೆರಿಗೆಗಳಿಂದ ಸಂಗ್ರಹವಾಗುವ ಅತಿಹೆಚ್ಚು ಮೊತ್ತವನ್ನು ಕೇಂದ್ರಕ್ಕೆ ಸಲ್ಲಿಸುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದ ಸಿದ್ದರಾಮಯ್ಯ, ರಾಜ್ಯಕ್ಕೆ ಸಿಗುತ್ತಿರುವ ಪಾಲು ಬಹಳ ಕಡಿಮೆಯಾಗಿದೆ ಎಂದರು. 15ನೇ ಹಣಕಾಸು ಬಜೆಟ್ ನಲ್ಲಿ 14ನೇ ಹಣಕಾಸು ಬಜೆಟ್ ಗಿಂತ ಕಡಿಮೆ ಅನುದಾನ ರಾಜ್ಯಕ್ಕೆ ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು. ರಾಯಚೂರಲ್ಲಿ ಏಮ್ಸ್ ಸೇರಿದಂತೆ ರಾಜ್ಯದ ಹಲವಾರು ಬೇಡಿಕೆಗಳನ್ನು ಬಜೆಟ್ ನಲ್ಲಿ ಕಡೆಗಣಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ