Sparsha Rekha: ಗದಾಯುದ್ಧ ಶೂಟಿಂಗ್ ಪ್ರಾರಂಭವಾಗಿ ಮೂರು ವರ್ಷ, ಕತೆಯೇ ಮರೆತ ಸ್ಪರ್ಷ ರೇಖಾ

Edited By:

Updated on: May 29, 2023 | 6:35 AM

Sparsha Rekha: ಗದಾಯುದ್ಧ ಹೆಸರಿನ ಸಿನಿಮಾದಲ್ಲಿ ನಟಿಸಿರುವ ನಟಿ ಸ್ಪರ್ಷ ರೇಖಾ, ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಮೂರು ವರ್ಷಗಳ ಹಿಂದೆ ಆರಂಭವಾದ ಈ ಸಿನಿಮಾದ ಕತೆಯನ್ನೇ ನಟಿ ಮರೆತಿದ್ದಾರಂತೆ.

ಸ್ಪರ್ಷ ರೇಖಾ (Sparsha Rekha), ಒಂದು ಕಾಲದ ಸ್ಟಾರ್ ನಾಯಕಿ. ಬಹು ವರ್ಷಗಳ ಬಿಡುವಿನ ಬಳಿಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿರುವ ರೇಖ ಪ್ರಧಾನ ಪೋಷಕ ಪಾತ್ರಗಳಲ್ಲಿ, ಥ್ರಿಲ್ಲರ್ ಅಂಶಗಳುಳ್ಳ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಇದೀಗ ಸ್ಪರ್ಷ ರೇಖಾ ನಟಿಸಿರುವ ಗದಾಯುದ್ಧ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದಲ್ಲಿ ನಟಿಸಿರುವ ಸ್ಪರ್ಷ ರೇಖಾ, ಗದಾಯುದ್ಧ ಕತೆಯನ್ನು ಮೂರು ವರ್ಷದ ಹಿಂದೆ ನಿರ್ದೇಶಕರಿಂದ ಕೇಳಿದ್ದರಂತೆ ಈಗ ಕತೆಯೇ ಮರೆತುಹೋಗಿದೆ ಎಂದು ತಮಾಷೆ ಮಾಡಿದರು. ಸಿನಿಮಾದ ನಿರ್ದೇಶಕ ಹಾಗೂ ಇತರೆ ನಟರ ಬಗ್ಗೆ ಸ್ಪರ್ಷ ರೇಖಾ ಹೀಗೆ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 28, 2023 10:15 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More