ಚುನಾವಣಾ ಪ್ರಚಾರ ಮತ್ತು ಸದನದಲ್ಲಿ ಮಾತಾಡುವುದು ಬೇರೆ ಬೇರೆ ವಿಚಾರ ಅಂತ ಪ್ರದೀಪ್ ಈಶ್ವರ್ ಗೆ ಮನದಟ್ಟು ಮಾಡಿಸಿದ ಸ್ಪೀಕರ್ ಯುಟಿ ಖಾದರ್!

|

Updated on: Jul 06, 2023 | 2:17 PM

ಆಯ್ತು ಅದೆಲ್ಲ ಬಿಡಿ ನಿಮ್ಮ ಪ್ರಾಬ್ಲಂ ಏನು ಅನ್ನೋದನ್ನು ಹೇಳಿ ಎಂದು ಸ್ಪೀಕರ್ ಹೇಳಿದಾಗ ಪ್ರದೀಪ್ ಒಂದು ಕ್ಷಣ ಗರಬಡಿದವರಂತಾಗುತ್ತಾರೆ.

ಬೆಂಗಳೂರು: ಚುನಾವಣಾ ಪ್ರಚಾರ ಮತ್ತು ಮಾಧ್ಯಮಗಳಿಗೆ ಬೈಟ್ ನೀಡುವುದು ಮತ್ತು ಸದನದಲ್ಲಿ ಚರ್ಚಿತ ವಿಷಯವೊಂದರ ಮೇಲೆ ಪ್ರಶ್ನೆ ಕೇಳುವುದರ ನಡುವೆ ಅಜಗಜಾಂತರ ವ್ಯತ್ತಾಸವಿದೆ ಅನ್ನೋದನ್ನು ಫರ್ಸ್ಟ್ ಟೈಮರ್ ಹಾಗೂ ಚಿಕ್ಕಬಳ್ಳಾಪುರದಲ್ಲ ಡಾ ಕೆ ಸುಧಾಕರ್ (Dr K Sudhakar) ಅವರನ್ನು ಸೋಲಿಸಿ ದೈತ್ಯ ಸಂಹಾರಿ ಎನಿಸಿಕೊಂಡಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಇಂದು ಮನಗಂಡರು. ಬಜೆಟ್ ಅಧಿವೇಶನದ 4ನೇ ದಿನವಾದ ಇಂದು ಪ್ರದೀಪ್ ಪ್ರಶ್ನೆಯೊಂದನ್ನು ಕೇಳಲು ಎದ್ದುನಿಂತು ಹಿಂದಿನ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅಂತ ಪೀಠಿಕೆ ಹಾಕಲಾರಂಭಿಸುತ್ತಾರೆ. ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಪ್ರತಿದಿನ ನಡೆಯುತ್ತಿರುವ ವಾದ-ವಾಗ್ವಾದಗಳಿಂದ ಬಸವಳದಿರುವ ಸ್ಪೀಕರ್ ಯುಟಿ ಖಾದರ್ (UT Khader), ಆಯ್ತು ಅದೆಲ್ಲ ಬಿಡಿ ನಿಮ್ಮ ಪ್ರಾಬ್ಲಂ ಏನು ಅನ್ನೋದನ್ನು ಹೇಳಿ ಎಂದಾಗ ಪ್ರದೀಪ್ ಒಂದು ಕ್ಷಣ ಗರಬಡಿದವರಂತಾಗುತ್ತಾರೆ! ಉಳಿದ ವಿಷಯಗಳನ್ನು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುವಾಗ ಮಾತಾಡಿ, ಈಗ ನಿಮ್ಮ ಪ್ರಶ್ನೆ ಏನು, ಸತ್ಯ ಸಾಯಿ ಸಂಸ್ಥೆಗೆ ಅನುಮತಿ ಕೊಡಬೇಕು, ಆಯ್ತು ಕೂತ್ಕೊಳ್ಳಿ ಎಂದು ಸ್ಪೀಕರ್ ಹೇಳುವ ಬೇರೆಯವರಿಗೆ ಮಾತಾಡುವ ಅವಕಾಶ ನೀಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ