ವಿರೋಧ ಪಕ್ಷಗಳಿಂದ ಮುಡಾ ಹಗರಣ ಚರ್ಚೆಯ ಬೇಡಿಕೆಯನ್ನು ಮನ್ನಿಸದ ಸ್ಪೀಕರ್ ಖಾದರ್
ನೀ ಕೊಡೆ ನಾ ಬಿಡೆ ಅಂತ ಹೇಳ್ತಾರಲ್ಲ ಆ ತಿಕ್ಕಾಟ ಸದನಲ್ಲಿಂದು ವಿರೋಧಪಕ್ಷಗಳ ಸದಸ್ಯರು ಮತ್ತು ಸ್ಪೀಕರ್ ಯುಟಿ ಖಾದರ್ ನಡುವೆ ನಡೆಯಿತು. ಮುಡಾ ಹಗರಣ ಸಿಬಿಐನಿಂದ ತನಿಖೆಯಾಗಬೇಕು ಅಂತ ಗುರುವಾರ ವಿಧಾನ ಸೌಧದಲ್ಲಿ ಅಂತ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಹೇಳಿದ್ದರು.
ಬೆಂಗಳೂರು: ಮುಡಾ ಹಗರಣದ ಮೇಲೆ ಚರ್ಚೆಗೆ ಅವಕಾಶ ನೀಡಬೇಕೆಂದು ಸ್ಪೀಕರ್ ಯುಟಿ ಖಾದರ್ ಮನವೊಲಿಸಲು ವಿರೋಧ ಪಕ್ಷಗಳ ಸದಸ್ಯರು ಭಗೀರಥ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಬಿಜೆಪಿ ನಾಯಕರು ಸಭಾಧ್ಯಕ್ಷರ ಪೀಠದ ಮುಂದೆ ನಿಂತು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕೇವಲ ಹತ್ತು ನಿಮಿಷ ಅವಕಾಶ ಕೊಡಿ ಎಂದು ಗೋಗರೆದರು. ಆದರೆ ಸ್ಪೀಕರ್ ಮಾತ್ರ, ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ, ಊರು ಅಥವಾ ಜಿಲ್ಲೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯಿದ್ದರೆ ಕೇಳಿ, ಅದಕ್ಕೆ ಅವಕಾಶವಿದೆ ಅದರೆ ಹಿಂದೆ ಯಾವತ್ತೋ ನಡೆದ ಪ್ರಕರಣಗಳನ್ನು ಚರ್ಚೆ ಮಾಡಲು ಅವಕಾಶ ನೀಡಿ ಒಂದು ಕೆಟ್ಟ ಸಂಪ್ರದಾಯಕ್ಕೆ ನಾನು ನಾಂದಿ ಹಾಡಲಾರೆ, ಹಿಂದೆ ಅಂಥ ಪ್ರಸಂಗ ನಡೆದಿಲ್ಲ ಈಗಲೂ ನಡೆಯಬಾರದು ಎಂದು ಹೇಳಿದರು. ಸ್ಪೀಕರ್ ಮನವೊಲಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೀಕರ್ ಎಡಭಾಗದಲ್ಲಿದ್ದ ಫ್ಲಾವರ್ ವೇಸ್ ನಿಂದ ಹೂ ತೆಗೆದುಕೊಂಡು ಸ್ಪೀಕರ್ ಗೆ ನೀಡಿದರು. ಖಾದರ್ ಮುಗುಳ್ನಕ್ಕರೇ ಹೊರತು ಅವಕಾಶ ನೀಡಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: MUDA Site Allotment Case: ಶಾಸಕರು, ಮಾಜಿ ಶಾಸಕರು ಸೇರಿ 24 ಮಂದಿಗೆ ಬೆಂಗಳೂರು ಸಿಬಿಐ ಕೋರ್ಟ್ನಿಂದ ಸಮನ್ಸ್ ಜಾರಿ