ಶಿರೂರು ಗುಡ್ಡ ಕುಸಿತ: ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
ನಿಯತ್ತಿಗೆ ಹೆಸರಾದ ಶ್ವಾನ ಕಂಡರೆ ಯಾರಿಗೆ ಪ್ರೀತಿ ಇಲ್ಲ ಹೇಳಿ, ನಾವು ಮನೆಯಲ್ಲಿ ಇಲ್ಲದೆ ಇದ್ದರೂ ನಾವು ಬರುವವರೆಗೂ ಮನೆ ಯಜಮಾನನಂತೆ ಕಾಯುತ್ತಿರುತ್ತದೆ. ಇದೀಗ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಹೊಟೇಲ್ ಮಾಲೀಕನ ಕುಟುಂಬ ಕೊನೆಯುಸಿರೆಳೆದಿದೆ. ಆದರೆ, ಆತ ಸಾಕಿದ್ದ ಶ್ವಾನ ಮಾತ್ರ ಮಾಲೀಕನ ಬರುವಿಕೆಗಾಗಿ ಹಗಲಿರುಳು ಕಾಯುತ್ತಿದೆ. ಇಂದು ಹೊಟೇಲ್ ಇದ್ದ ಸ್ಥಳದಲ್ಲಿನ ಮಣ್ಣು ತೆರವು ಮಾಡುತ್ತಿರುವ ಹಿನ್ನೆಲೆ ಎಸ್ಡಿಆರ್ಎಫ್, ಎನ್ಡಿಆರ್ಎಫ್ ತಂಡವನ್ನ ಮೃತ ಲಕ್ಷ್ಮಣ ಕುಟುಂಬಸ್ಥರು ಸಾಕಿದ್ದ ಶ್ವಾನ ಬೆನ್ನತ್ತಿದೆ. ಕಾರ್ಯಾಚರಣೆ ಮಾಡುವ ಸ್ಥಳದ ಸುತ್ತ ತಿರುಗಾಡುತ್ತಿದ್ದು, ಮಾಲೀಕನ ಬರುವಿಕೆಗಾಗಿ ಕಾದು ಕುಳಿತಿದೆ.
ಉತ್ತರ ಕನ್ನಡ, ಜು.25: ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತನೆ ದಿನದ ಕಾರ್ಯಾಚರಣೆ ತೀವ್ರಗೊಂಡಿದೆ. ಈಗಾಗಲೇ ಎಂಟು ಜನರ ಮೃತದೇಹ ಸಿಕ್ಕಿದ್ದು, ಇನ್ನುಳಿದ ನಾಲ್ವರ ಹುಡುಕಾಟದಲ್ಲಿ ಸಿಬ್ಬಂದಿಗಳು ತೊಡಗಿದ್ದಾರೆ. ಈ ನಡುವೆ ಹೊಟೇಲ್ ಇದ್ದ ಸ್ಥಳದಲ್ಲಿನ ಮಣ್ಣು ತೆರವು ಮಾಡುತ್ತಿರುವ ಹಿನ್ನೆಲೆ ಎಸ್ಡಿಆರ್ಎಫ್, ಎನ್ಡಿಆರ್ಎಫ್ ತಂಡವನ್ನ ಮೃತ ಲಕ್ಷ್ಮಣ ಕುಟುಂಬಸ್ಥರು ಸಾಕಿದ್ದ ಶ್ವಾನ ಬೆನ್ನತ್ತಿದೆ. ಕಾರ್ಯಾಚರಣೆ ಮಾಡುವ ಸ್ಥಳದ ಸುತ್ತ ತಿರುಗಾಡುತ್ತಿದೆ. ಶ್ವಾನದ ಮೂಕರೋಧನೆ ಕಂಡು ಎಸ್ಡಿಆರ್ಎಫ್ ಸಿಬ್ಬಂದಿ ಬಿಸ್ಕೆಟ್ ಹಾಕಿದ್ದಾರೆ. ನಿಜಕ್ಕೂ ಆ ದೃಶ್ಯ ನೋಡಿದರೆ ಎಂತಹವರಿಗೂ ಮನಕಲುಕುವಂತಿದೆ. ನಿತ್ಯವೂ ತನಗೆ ಆಹಾರ ನೀಡುತ್ತಿದ್ದ ಮಾಲೀಕ, ತನ್ನನ್ನು ಮನೆ ಸದಸ್ಯನಂತೆ ನೋಡಿಕೊಳ್ಳುತ್ತಿದ್ದಾತ ಎಲ್ಲಿ ಹೋದರು ಎಂದು ಸಾಕು ನಾಯಿ ಪರದಾಡುತ್ತಿದೆ. ಮನಕಲಕುವ ದೃಶ್ಯ ಇಲ್ಲಿದೆ ನೋಡಿ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ