ಪ್ರಧಾನಿ ಮೋದಿಯವರ ಮಂಗಳೂರು ಕಾರ್ಯಕ್ರಮಕ್ಕೆ ಎಸ್ ಪಿಜಿ ನಿರ್ದೇಶನದಲ್ಲಿ ವೇದಿಕೆ ಸಿದ್ಧವಾಗುತ್ತಿದೆ

Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 01, 2022 | 2:21 PM

ಪೆಂಡಾಲ ಮತ್ತು ವೇದಿಕೆಯನ್ನು ಪ್ರಧಾನಿಗಳ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಅವರ ನಿರ್ದೇಶನದ ಮೇರೆಗೆ ನಿರ್ಮಿಸಲಾಗುತ್ತಿದೆ. ಪೊಲೀಸ್ ಭದ್ರತೆಯನ್ನು ಹೆಚ್ಚಿಸಲು ಬೇರೆ ಜಿಲ್ಲೆಗಳಿಂದ ಸಿಬ್ಬಂದಿಯನ್ನು ಕರೆಸಲಾಗಿದೆ.

ಮಂಗಳೂರು: ಇಂದು (ಗುರುವಾರ) ನೆಲಮಂಗಲದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಮಿಸಿದ್ದರೆ ನಾಳೆ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆಗಮಿಸಲಿದ್ದಾರೆ. ಅವರನ್ನು ಬರಮಾಡಿಕೊಳ್ಳಲು ಕರಾವಳಿ ನಗರ ಭರದಿಂದ ಸಿದ್ಧಗೊಳ್ಳುತ್ತಿದೆ. ಟಿವಿ9 ಮಂಗಳೂರು ವರದಿಗಾರ ಪೃಥ್ವಿರಾಜ ಬೊಮ್ಮನಕೆರೆ ಅವರು ಸಿದ್ಧತೆಗಳ ಬಗ್ಗೆ ಒಂದು ವರದಿಯನ್ನು ಕಳಿಸಿದ್ದಾರೆ. ಪೆಂಡಾಲ ಮತ್ತು ವೇದಿಕೆಯನ್ನು ಪ್ರಧಾನಿಗಳ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (SPG) ಅವರ ನಿರ್ದೇಶನದ ಮೇರೆಗೆ ನಿರ್ಮಿಸಲಾಗುತ್ತಿದೆ. ಪೊಲೀಸ್ ಭದ್ರತೆಯನ್ನು (security) ಹೆಚ್ಚಿಸಲು ಬೇರೆ ಜಿಲ್ಲೆಗಳಿಂದ ಸಿಬ್ಬಂದಿಯನ್ನು ಕರೆಸಲಾಗಿದೆ.