Temple Tour: ರಾಮದೇವರ ಬೆಟ್ಟಕ್ಕೆ ಶೋಲೆ ಬೆಟ್ಟ ಅಂತ ಹೆಸರು ಬಂದಿದ್ದು ಈ ಸಿನಿಮಾದಿಂದ

| Updated By: preethi shettigar

Updated on: Nov 13, 2021 | 8:19 AM

ಶ್ರೀ ಪಟ್ಟಾಭಿರಾಮನ ಮಂದಿರ ಸಾಕಷ್ಟು ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನೂ ಒಳಗೊಂಡಿದೆ. ರಾಮನಗರದ ಶ್ರೀರಾಮನಗರ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಪಟ್ಟಾಭಿರಾಮ ದೇವಸ್ಥಾನಕ್ಕೆ ತನ್ನದೆ ಆದ ಇತಿಹಾಸವಿದೆ.

ರಾಮನಗರದ ಶ್ರೀರಾಮದೇವರ ಬೆಟ್ಟ ಯಾರಿಗೆ ಗೊತ್ತಿಲ್ಲ ಹೇಳಿ. ಸಿಲಿಕಾನ್ ಸಿಟಿ ಜನರ ಅಚ್ಚುಮೆಚ್ಚಿನ ತಾಣವಿದು. ಪಕ್ಷಿ ಪ್ರಿಯರನ್ನ ಸೆಳೆಯುವ ಸ್ಥಳವೂ ಹೌದು. ಹಿಂದಿಯ ಶೋಲೆ ಚಿತ್ರ ಇಲ್ಲಿ ಚಿತ್ರೀಕರಣದ ನಂತರ ಈ ಬೆಟ್ಟವನ್ನ ಶೋಲೆ ಬೆಟ್ಟ ಎಂತಲೇ ಖ್ಯಾತಿ ಪಡೆದಿದೆ. ಅಷ್ಟೇ ಅಲ್ಲ ರಣಹದ್ದುಗಳ ವನ್ಯಜೀವಿಧಾಮ ಕೂಡ. ಇಂತಹ ಬೆಟ್ಟದಲ್ಲಿ ಶ್ರೀ ಪಟ್ಟಾಭಿರಾಮನ ಅಪರೂಪದ ದೇವಸ್ಥಾನವಿದೆ. ಶ್ರೀ ಪಟ್ಟಾಭಿರಾಮನ ಮಂದಿರ ಸಾಕಷ್ಟು ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನೂ ಒಳಗೊಂಡಿದೆ. ರಾಮನಗರದ ಶ್ರೀರಾಮನಗರ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಪಟ್ಟಾಭಿರಾಮ ದೇವಸ್ಥಾನಕ್ಕೆ ತನ್ನದೆ ಆದ ಇತಿಹಾಸವಿದೆ. ರಾಮನಗರ ಜಿಲ್ಲೆಯ ಜನರ ನಂಬಿಕೆಯ ನೆಲೆಬೀಡು ಇದಾಗಿದೆ. ಅಂದಹಾಗೆ ಶ್ರೀ ಪಟ್ಟಾಭಿರಾಮನ ದೇವಸ್ಥಾನಕ್ಕೆ ಸಾಕಷ್ಟು ಇತಿಹಾಸವಿದ್ದು, ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀ ರಾಮನ ವಿಗ್ರಹ ಏಕಶಿಲೆಯಲ್ಲಿ ಕುಳಿತ ಭಂಗಿಯಲ್ಲಿ ಕೆತ್ತಲಾದ ವಿಗ್ರಹವಾಗಿದೆ.