Temple Tour: ಹೂಬಳ್ಳಿಯ ಹೂವುಗಳಂತೆ ಶೋಭಿಸುವ ಮೂರು ಸಾವಿರ ಮಠ

| Updated By: ಆಯೇಷಾ ಬಾನು

Updated on: Nov 04, 2021 | 8:39 AM

ಹುಬ್ಬಳ್ಳಿಯ ತಪೋವನದ ಗವಿಯಲ್ಲಿ ಉಗ್ರ ಅನುಷ್ಠಾನಗೈದು ಲಿಂಗೈಕ್ಯರಾದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರರ ಜಾಗೃತ ಸಮಾಧಿಯು ಶ್ರೀಮಠದ ಬಲಭಾಗದಲ್ಲಿ "ಹುಚ್ಚನ ಗದ್ದಿಗೆ" ಎಂದೇ ಭಕ್ತರು ಕರೆಯುತ್ತಾರೆ. ಶ್ರೀ ಮೂರು ಸಾವಿರ ಮಠದ ಹುಚ್ಚನೆಂದರೆ ಬೆಂಕಿಯ ಕೆಂಡ.

ರಾಜ್ಯದ ನಾನಾ ಭಾಗಗಳಲ್ಲಿ ಇರುವಂತಾ ದೇಗುಲಗಳು ಸ್ಥಳೀಯವಾಗಿ ಮತ್ತು ರಾಜ್ಯವ್ಯಾಪಿಯಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿವೆ. ಅಂತಾ ದೇಗುಲಗಳ ವಿಶೇಷತೆಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲೋ ವಿಶೇಷ ಕಾರ್ಯಕ್ರಮವೇ ಈ ಟೆಂಪಲ್ ಟೂರ್. ಇಂದು ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಲಿಂಗಾಯತ ಮಠದ ವಿಶೇಷತೆ ತಿಳಿಯೋಣ. ಅನ್ನದಾಸೋಹ ಅಕ್ಷರ ದಾಸೋಹಕ್ಕೆ ಪ್ರಸಿದ್ಧಿ ಪಡೆದಿರುವ ಈ ಮಠವೇ ಹುಬ್ಬಳ್ಳಿಯ ಮೂರು ಸಾವಿರ ಮಠ. ಮೂರು ಸಾವಿರ ಮಠ ಹುಬ್ಬಳ್ಳಿಯಲ್ಲಿ ಹೂಬಳ್ಳಿಯ ಹೂವುಗಳಂತೆ ಶೋಭಿಸುವ ಮಠವೆಂದು ಸುಪ್ರಸಿದ್ಧವಾಗಿದೆ. 12ನೇ ಶತಮಾನದ ಶಿರಸಿಯ ಶಿಲಾಶಾಸನದಲ್ಲಿ ಮೂರು ಸಾವಿರ ಮಠದ ಉಲ್ಲೇಖವಿದೆ. ಶೈವ ಮೂಲದ ತಾಯಿ ಬೇರಿನಿಂದ ಈ ಮಠವು ಅಲ್ಲಮ ಸಂಪ್ರದಾಯದ ಶೂನ್ಯ ಸಿಂಹಾಸನ ಪೀಠವಾಗಿ ಉತ್ಕ್ರಾಂತಿಯಾಗಿದೆ ಎಂದು ಊಹಿಸಲಾಗಿದೆ.

ಈ ಹುಬ್ಬಳ್ಳಿಯ ತಪೋವನದ ಗವಿಯಲ್ಲಿ ಉಗ್ರ ಅನುಷ್ಠಾನಗೈದು ಲಿಂಗೈಕ್ಯರಾದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರರ ಜಾಗೃತ ಸಮಾಧಿಯು ಶ್ರೀಮಠದ ಬಲಭಾಗದಲ್ಲಿ “ಹುಚ್ಚನ ಗದ್ದಿಗೆ” ಎಂದೇ ಭಕ್ತರು ಕರೆಯುತ್ತಾರೆ. ಶ್ರೀ ಮೂರು ಸಾವಿರ ಮಠದ ಹುಚ್ಚನೆಂದರೆ ಬೆಂಕಿಯ ಕೆಂಡ. ಅವನ ಅ೦ಗಾರ ಹಿಡಿದು ಆಣೆಮಾಡಿದರೆ ಸಮಸ್ಯೆ ಮುಗಿಯಿತು ಎ೦ದು ಜನ ಇಂದಿಗೂ ನಂಬಿರುವರು. ಈ ಕಾರಣದಿ೦ದ ಇದಕ್ಕೆ ಹುಚ್ಚನ ಮಠ, ಗುರುಸಿದ್ಧಪ್ಪನ ಮಠ ಎ೦ದು ಕರೆಯಲಾಗುತ್ತದೆ. ಕಿತ್ತೂರು ಚನ್ನಮ್ಮನ ಸಂಸ್ಥಾನ ಅವನತಿಯ ನ೦ತರ ಅದೇ ಸಂಸ್ಥಾನದ ಕಟ್ಟಗೆಗಳನ್ನೇ ಈ ಮಠಕ್ಕೆ ಜೋಡಿಸಲಾಗಿದೆ. ತಾಳೆಗ್ರಂಥಗಳನ್ನು ಸಂಗ್ರಹಿಸಿಡಲು ಓಲೆಮಠವನ್ನು ಕಟ್ಟಲಾಯಿತು.

1958 ಮೇ 1 ರಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಇತಿಹಾಸದಲ್ಲಿ ನವಯುಗ ಆರಂಭವಾಯಿತು. ಮೂಜಗ೦ ರವರ ಕಾಲದಲ್ಲಿ ಅನೇಕ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿದರು. ಮಹಿಳೆಯರಿಗಾಗಿಯೇ ಶಾಲೆ, ಕಾಲೇಜುಗಳು, ಶಿಸುವಿಹಾರಗಳನ್ನು ಸ್ಥಾಪಿಸಿದ್ದಲ್ಲದೇ ಈ ಜಗದ್ಗುರುಗಳವರು ಹುಬ್ಬಳ್ಳಿ ಮಹಾನಗರದಲ್ಲಿ ಪ್ರಪ್ರಥಮ ಮಹಿಳಾ ಕಾಲೇಜೊಂದನ್ನು ಸ್ಥಾಪಿಸಿದರು. ಅನ್ನದಾಸೋಹದ ಜತೆಗೆ ಅಕ್ಷರ ದಾಸೋಹವನ್ನು ನಡೆಸುತ್ತಾ ಬಂದಿರುವ ಹುಬ್ಬಳ್ಳಿ ಮೂರು ಸಾವಿರ ಮಠ ನಾಡಿನಲ್ಲಿ ಶ್ರದ್ಧಾ ಭಕ್ತಿ ಮತ್ತು ಆಧ್ಯಾತ್ಮ ಸಾರವನ್ನು ಹಂಚುತ್ತಿದೆ. ಆ ಮೂಲಕ ಧರ್ಮ ಕಾರ್ಯದ ಜತೆಗೆ ಶಿಕ್ಷಣ ಕಾರ್ಯವನ್ನು ಮಾಡುತ್ತಿದೆ.

ಇದನ್ನೂ ಓದಿ:

Temple Tour: ಉದ್ಭವ ಮೂರ್ತಿಯಾಗಿ ವೀರಭದ್ರ ಸ್ವಾಮಿ ಎದ್ದು ನಿಂತ ದೇವಾಲಯದ ದರ್ಶನ ಪಡೆಯಿರಿ

Temple Tour: ಉದ್ಭವ ಮೂರ್ತಿಯಾಗಿ ವೀರಭದ್ರ ಸ್ವಾಮಿ ಎದ್ದು ನಿಂತ ದೇವಾಲಯದ ದರ್ಶನ ಪಡೆಯಿರಿ