Temple Tour: ಸಿದ್ದಾರೂಢರು ತಪಸ್ಸು ನಡೆಸಿದ ಪುಣ್ಯಧಾಮವಿದು
ಹುಬ್ಬಳ್ಳಿ ಅಂದ್ರೆ ನೆನಪಿಗೆ ಬರೋದು ಸಾಧು ಸಂತರ ನಾಡು, ಮಳೆ ಬೆಳೆ ಸೃಮೃದ್ಧವಾಗಿರು ಬೀಡು. ಹೂಬಳ್ಳಿ ಅನ್ನೋ ಪದವೇ ಕಾಲಾನುಕಾಲದಿಂದ ಹುಬ್ಬಳ್ಳಿಯಾಗಿ ಬದಲಾಗಿದೆ.
ನಮ್ಮ ರಾಜ್ಯದಲ್ಲಿರುವ ಸಾಕಷ್ಟು ದೈವ ಮಂದಿರಗಳು ಇತಿಹಾಸ ಪ್ರಸಿದ್ಧವಾಗಿವೆ. ಕೆಲ ಮಂದಿರಗಳು ರಾಜರುಗಳ ಆಳ್ವಿಕೆಯಲ್ಲಿ ಜೀರ್ಣೋದ್ಧಾರ ಕಂಡಿವೆ. ಆದರೆ ಹುಬ್ಬಳ್ಳಿಯ ಮಂದಿರ ಗುರು ಸಿದ್ಧಾರೂಢರು ತಪಸ್ಸು ಮಾಡಿದ ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ಹುಬ್ಬಳ್ಳಿ ಅಂದ್ರೆ ನೆನಪಿಗೆ ಬರೋದು ಸಾಧು ಸಂತರ ನಾಡು, ಮಳೆ ಬೆಳೆ ಸೃಮೃದ್ಧವಾಗಿರು ಬೀಡು. ಹೂಬಳ್ಳಿ ಅನ್ನೋ ಪದವೇ ಕಾಲಾನುಕಾಲದಿಂದ ಹುಬ್ಬಳ್ಳಿಯಾಗಿ ಬದಲಾಗಿದೆ. ತನ್ನದೇ ಆದ ವಿಶೇಷತೆಗಳಿಂದ ಕೂಡಿರುವ ಈ ನಗರದಲ್ಲಿ ಭಕ್ತರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಮಂದಿರ ಒಂದಿದೆ. ಅದು ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿದ ದೇವಸ್ಥಾನ. ಪ್ರಸಿದ್ಧ ಆರೋಢ ಸಂಪ್ರದಾಯದ ಸಿದ್ಧರೋಡ ಮಹಾಸ್ವಾಮಿಗಳು ತಪ್ಪಸ್ಸು ಮಾಡಿರುವ ದೇವಸ್ಥಾನ. ಚಾಲುಕ್ಯರ ಕಾಲದಲ್ಲಿ ಸ್ಥಾಪಿತವಾದ ಮತ್ತು ಜೀರ್ಣೋದ್ಧಾರವಾದ ದೇವಸ್ಥಾನ ಬಹಳ ಪ್ರಸಿದ್ಧಿಯನ್ನ ಪಡೆದಿದ್ದು, ಈ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.