Temple Tour: ಬಸವಣ್ಣನವರು ಕಾಲಿಟ್ಟು ಹೋದ ಪುಣ್ಯ ಪರಂಧಾಮವಿದು
ಉತ್ತರ ಕನ್ನಡ ಜಿಲ್ಲೆಯ ಉಳವಿ ಕಡೆಗೆ ಹೋಗುವಾಗ ಧಾರವಾಡದಲ್ಲಿ ಕೆಲ ಕಾಲ ತಂಗಿದ್ದರು. ಅವರು ತಂಗಿದ್ದ ಸ್ಥಳವೇ ಇಂದು ಉಳವಿ ಚೆನ್ನಬಸವೇಶ್ವರ ದೇವಸ್ಥಾನವೆಂದು ಪ್ರಸಿದ್ದಿ ಪಡೆದಿದೆ.
ಏಕದೇವತೋಪಾಸನೆ, ಸರ್ವ ಸಮಾನತೆಯ ವಿಚಾರಗಳು, ಮಹಾಮನೆಯ ವಿಚಾರಗೋಷ್ಠಿಗಳ ಮೂಲಕ ಹನ್ನೆರಡನೇ ಶತಮಾನದಲ್ಲಿಯೇ 21ನೇ ಶತಮಾನದ ವಿಚಾರಧಾರೆಗಳನ್ನು ಅನುಷ್ಠಾನಕ್ಕೆ ತಂದ ದೂರದೃಷ್ಟಿಯ ಮಹಾನ್ ವ್ಯಕ್ತಿ ಬಸವಣ್ಣ. ಜನರಿಗೆ ತಮ್ಮ ವಚನ ಸಾಹಿತ್ಯದ ಮೂಲಕ ಸರಳ ಕನ್ನಡದಲ್ಲಿ ಬದುಕಿನ ವಾಸ್ತವಗಳನ್ನು ಅರ್ಥೈಸುವ ಪ್ರಯತ್ನಗಳನ್ನು ನಡೆಸಿದವರು. ಅವರ ವಚನಗಳನ್ನು ಉಳಿಸಿಕೊಳ್ಳಲು ಅವರ ಅಳಿಯ ಚನ್ನಬಸವೇಶ್ವರ ಕಾಡುಮೇಡುಗಳಲ್ಲಿ ಅಲೆದು, ಈಗಿನ ಉತ್ತರ ಕನ್ನಡ ಜಿಲ್ಲೆಯ ಉಳವಿ ಕಡೆಗೆ ಹೋಗುವಾಗ ಧಾರವಾಡದಲ್ಲಿ ಕೆಲ ಕಾಲ ತಂಗಿದ್ದರು. ಅವರು ತಂಗಿದ್ದ ಸ್ಥಳವೇ ಇಂದು ಉಳವಿ ಚೆನ್ನಬಸವೇಶ್ವರ ದೇವಸ್ಥಾನವೆಂದು ಪ್ರಸಿದ್ದಿ ಪಡೆದಿದೆ.