‘ಬೈ ಟೂ ಲವ್​’ ನೋಡಿ ಪ್ರೇಕ್ಷಕರು ಎಮೋಷನಲ್​ ಆಗುತ್ತಿದ್ದಾರೆ: ಶ್ರೀಲೀಲಾ

| Updated By: ರಾಜೇಶ್ ದುಗ್ಗುಮನೆ

Updated on: Feb 21, 2022 | 3:12 PM

ನಟಿ ಶ್ರೀಲೀಲಾ ಅವರಿಗೆ ಬೇಡಿಕೆ ಹೆಚ್ಚಿದೆ. ಅವರು ನಟನೆಯಲ್ಲಿ ಮಾಗಿದ್ದಾರೆ. ಶ್ರೀಲೀಲಾ ನಿರ್ವಹಿಸಿರುವ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಟಿ ಶ್ರೀಲೀಲಾ (Sreeleela) ಹಾಗೂ ಧನ್ವೀರ್​ (Dhanveer) ನಟನೆಯ ‘ಬೈ ಟೂ ಲವ್​’ ಕಳೆದ ಶುಕ್ರವಾರ (ಫೆಬ್ರವರಿ 18) ರಿಲೀಸ್​ ಆಗಿದೆ. ಈ ಸಿನಿಮಾದಲ್ಲಿ ಲವ್​ ಸ್ಟೋರಿ ಜತೆಗೆ ಎಮೋಷನಲ್​ ದೃಶ್ಯಗಳೂ ಹೈಲೈಟ್​ ಆಗಿದೆ. ಈ ಸಿನಿಮಾದ ಮೂಲಕ ನಟಿ ಶ್ರೀಲೀಲಾ ಅವರಿಗೆ ಬೇಡಿಕೆ ಹೆಚ್ಚಿದೆ. ಅವರು ನಟನೆಯಲ್ಲಿ ಮಾಗಿದ್ದಾರೆ. ಶ್ರೀಲೀಲಾ ನಿರ್ವಹಿಸಿರುವ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಚಾರಕ್ಕೆ ಶ್ರೀಲೀಲಾ ಕೂಡ ಖುಷಿಯಾಗಿದ್ದಾರೆ. ಉತ್ತರ ಕರ್ನಾಟಕ ಪ್ರವಾಸದಲ್ಲಿ ‘ಬೈ ಟೂ ಲವ್​’ (By Two Love) ತಂಡ ಇದೆ. ಅಲ್ಲಿಯೂ ಚಿತ್ರದ ಪ್ರಚಾರ ಕಾರ್ಯ ಮಾಡುತ್ತಿದೆ ತಂಡ. ‘ನಮ್ಮ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ. ಫೈಟಿಂಗ್​ ಬಂದಾಗ ಜನರು ಮೆಚ್ಚಿಕೊಂಡಿದ್ದು ನೋಡಿದ್ದೇನೆ. ಆದರೆ, ಎಮೋಷನಲ್​ ದೃಶ್ಯಕ್ಕೂ ಜನರು ಖುಷಿಯಾಗಿದ್ದು ನೋಡಿ ಸಂತಸವಾಯಿತು’ ಎಂದರು ಅವರು.

ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ‘ಬೈ ಟೂ ಲವ್’ ತಂಡ; ಶ್ರೀಲೀಲಾ-ಧನ್ವೀರ್ ಮಸ್ತಿ

ಸ್ಯಾಡ್​ ಮ್ಯೂಸಿಕ್​ ಕೇಳಿದ್ರೆ ಗಳಗಳನೆ ಅಳ್ತಾರೆ ನಟಿ ಶ್ರೀಲೀಲಾ; ‘ಮಹಾನಟಿ’ ಎಂಬ ಹೊಗಳಿಕೆ

Published On - 3:12 pm, Mon, 21 February 22

Follow us on