ಮಠಕ್ಕೆ ಕರೆತಂದು ಓದಿಸಿ ಬೆಳೆಸಿದ ‘ಅಜ್ಜಾ‘ರನ್ನು ಗವಿಮಠದ ಗವಿಸಿದ್ದೇಶ್ವರ ಸ್ವಾಮಿಗಳು ಅತ್ಯಂತ ಭಾವುಕರಾಗಿ ನೆನೆದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 23, 2022 | 4:09 PM

ಬಡಕುಟುಂಬದವರಾಗಿದ್ದ ತಮ್ಮನ್ನು ಮಠಕ್ಕೆ ವಿದ್ಯೆ ನೀಡಿ ಬೆಳೆಸಿದ್ದನ್ನು ನೆನೆಸಿ ಕಣ್ಣೀರಾದರು. ಕೇವಲ 160 ವಿದ್ಯಾರ್ಥಿಗಳಿಂದ ಆರಂಭಗೊಂಡ ವಸತಿ ನಿಲಯದಲ್ಲಿ ಈಗ 5,000 ವಿದ್ಯಾರ್ಥಿಗಳಿದ್ದಾರೆ.

ಕೊಪ್ಪಳದಲ್ಲಿ (Koppal) ಗವಿಮಠದ ಶ್ರೀ ಮರಿ ಶಾಂತವೀರ ಸ್ವಾಮೀಜಿ (Mari Shantveer Swamiji) ಅವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅತ್ಯಂತ ಭಾವುಕರಾಗಿ ಮಾತಾಡಿದ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು (Sri Gavisiddeshwara Swamiji) ಶಾಂತವೀರ ಸ್ವಾಮಿ ಅವರು ಆರಂಭಿಸಿದ ಅನ್ನದಾಸೋಹ ಮತ್ತು ಅಕ್ಷರ ದಾಸೋಹಗಳನ್ನು ನೆನೆದು ಕಣ್ಣೀರಿಟ್ಟರು. ಬಡಕುಟುಂಬದವರಾಗಿದ್ದ ತಮ್ಮನ್ನು ಮಠಕ್ಕೆ ವಿದ್ಯೆ ನೀಡಿ ಬೆಳೆಸಿದ್ದನ್ನು ನೆನೆಸಿ ಕಣ್ಣೀರಾದರು. ಕೇವಲ 160 ವಿದ್ಯಾರ್ಥಿಗಳಿಂದ ಆರಂಭಗೊಂಡ ವಸತಿ ನಿಲಯದಲ್ಲಿ ಈಗ 5,000 ವಿದ್ಯಾರ್ಥಿಗಳಿದ್ದಾರೆ. ಅವರ ವಾಸ ಮತ್ತು ಊಟಕ್ಕಾಗಿ ಕಟ್ಟಡದ ಅವಶ್ಯಕತೆಯಿದ್ದು ಉದಾರಿಗಳು ಸಹಾಯ ಮಾಡಬೇಕೆಂದು ಕೋರಿದಾಗ ಹಲಾವಾರು ಜನ ಮುಂದೆ ಬಂದು ಉದಾರವಾಗಿ ದೇಣಿಗೆ ನೀಡಿದರು. ಸಚಿವ ಆನಂದ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on