ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
Yuva Dasara: ಯುವ ದಸರಾ ಆರಂಭವಾಗಿದೆ. ಕಾರ್ಯಕ್ರಮದಲ್ಲಿ ನಿನ್ನೆ ನಟ ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ಭಾಗಿಯಾಗಿದ್ದರು. ವೇದಿಕೆ ಮೇಲೆ ಸಿನಿಮಾ ಡೈಲಾಗ್ ಹೊಡೆಯುವ ಮುಂಚೆ ಶ್ರೀಮುರಳಿ ಜನರಿಂದ ಪ್ರಮಾಣವೊಂದನ್ನು ಮಾಡಿಸಿಕೊಂಡರು.
ದಸರಾ ಆರಂಭವಾಗಿದೆ. ಯುವ ದಸರಾಕ್ಕೆ ನಿನ್ನೆ ಚಾಲನೆ ದೊರೆತಿದೆ. ಈ ಬಾರಿ ಯುವ ದಸರಾದ ಸ್ಥಳ ಬದಲಾವಣೆ ಮಾಡಲಾಗಿದೆ. ಕಳೆದ ಬಾರಿಗಿಂತಲೂ ಭಿನ್ನವಾಗಿ ಅದ್ಧೂರಿಯಾಗಿ ಯುವ ದಸರಾ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ನಿನ್ನೆ ನಟರಾದ ಶ್ರೀಮುರಳಿ ಮತ್ತು ನಟಿ ರುಕ್ಮಿಣಿ ವಸಂತ್ ಅವರುಗಳು ಯುವ ದಸರಾನಲ್ಲಿ ಭಾಗಿಯಾಗಿದ್ದರು. ಈ ವೇಳೆ ನಟ ಶ್ರೀಮುರಳಿ, ಯುವ ದಸರಾ ವೇದಿಕೆಯಲ್ಲಿ ಕೆಲ ಡೈಲಾಗ್ಗಳನ್ನು ಹೇಳಿ ಪ್ರೇಕ್ಷಕರನ್ನು ರಂಜಿಸಿದರು. ಆದರೆ ಅದಕ್ಕೂ ಮುನ್ನ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡರು. ‘ಬಘೀರ’ ಸಿನಿಮಾ ಡೈಲಾಗ್ ಹೇಳಿದ ಶ್ರೀಮುರಳಿ, ಎಲ್ಲರೂ ‘ಬಘೀರ’ ಸಿನಿಮಾವನ್ನು ಚಿತ್ರಮಂದಿರಕ್ಕೆ ಬಂದು ನೋಡುತ್ತೇನೆ ಎಂದು ನನ್ನ ಮೇಲೆ ಪ್ರಮಾಣ ಮಾಡಿ ಎಂದರು. ಇಲ್ಲಿದೆ ಶ್ರೀಮುರಳಿ ಹೇಳಿದ ಡೈಲಾಗ್ ವಿಡಿಯೋ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Wed, 25 September 24