ಹಿಂದೂ ಧಾರ್ಮಿಕ ಮೆರವಣಿಗೆಯಲ್ಲಿ ರಕ್ಷಣೆಗೆ ತಲವಾರು ಹಿಡಿದು 50 ಮಂದಿ ಸಜ್ಜು: ಶ್ರೀರಾಮ ಸೇನಾ ಮುಖಂಡ

| Updated By: ವಿವೇಕ ಬಿರಾದಾರ

Updated on: Sep 22, 2024 | 1:12 PM

ಮುಂಬರುವ ಗಣೇಶನ ಮೆರವಣಿಗೆ ಸೇರಿದಂತೆ ಇನ್ನಿತರ ಹಿಂದೂ ಧಾರ್ಮಿಕ ಕಾರ್ಯಕ್ರಮ ಮೆರವಣಿಗೆಗೆ ತಲವಾರು ಸಮೇತ 50 ಮಂದಿ ಶ್ರೀರಾಮ‌ಸೇನೆಯ ಕಾರ್ಯಕರ್ತರು ರಕ್ಷಣೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ‌ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲ್ಕರ್ಣಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರು ಸೆಪ್ಟೆಂಬರ್​ 22: ಇನ್ಮುಂದೆ ಹಿಂದೂ ಧಾರ್ಮಿಕ ಮೆರವಣಿಗೆಯನ್ನು ಮುಸ್ಲಿಂ (Muslim) ಗೂಂಡಾಗಳಿಂದ ರಕ್ಷಿಸಲು 50 ಮಂದಿ ಶ್ರೀರಾಮ‌ಸೇನೆ (Sri Ram Sena) ಕಾರ್ಯಕರ್ತರು ತಲವಾರು ಸಮೇತ ತಯಾರಾಗಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲ್ಕರ್ಣಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದಿಂದ ಜಹಾದಿ ಶಕ್ತಿಗಳು ಹದ್ದು ಮೀರುತ್ತಿವೆ. ಮುಸಲ್ಮಾನ ಪುಂಡರು ನಾಗಂಮಗಲ, ದಾವಣಗೆರೆಯಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಪೆಟ್ರೋಲ್ ಬಾಂಬ್ ಹಾಕುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಆರೋಪ ಮಾಡಿದರು.

ರಾಜ್ಯದಲ್ಲಿರುವುದು ನಮ್ಮ ಸರ್ಕಾರ ಅಂತ ಮುಸ್ಮಿಂ ಗುಂಡಾಗಳು ಬಹಿರಂಗವಾಗಿ ಹೇಳುತ್ತಿದ್ದಾರೆ. ರಾಜ್ಯ ಸರಕಾರ ಸಂಪೂರ್ಣವಾಗಿ ಅವರ ಜೊತೆಗೆ ನಿಂತಿದೆ. ಗೃಹ ಮಂತ್ರಿಗಳಿಗೆ ನಾಚಿಕೆ ಮಾನ ಮರ್ಯಾದೆ ಇದೆಯೋ ಇಲ್ವೋ ಗೊತ್ತಿಲ್ಲ. ನಾಗಮಂಗಲ ಕೋಮುಗಲಭೆ ಘಟನೆ ಆಕಸ್ಮಿಕ ಅಂತಾರೆ. ಗೃಹ ಮಂತ್ರಿಗಳು ಅಯೋಗ್ಯರು. ವ್ಯವಸ್ಥಿತಿವಾಗಿ ನಡೆಸಲಾದ ಗಲಭೆ ಆಕಸ್ಮಿಕ ಅಂತ ತೋರುತ್ತಿದೆಯಾ? ಇದೇ ಮುಸ್ಲಿಂ ಗೂಂಡಾಗಳಿಗೆ ಪ್ರೇರಣೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗಮಂಗಲ ಕೋಮುಗಲಭೆ ಘಟನೆ ಹಿಂದೆ ಪಿಎಫ್​ಐನವರಿದ್ದಾರೆ. ಈ ಕೂಡಲೇ ಗೃಹಸಚಿವರು ರಾಜೀನಾಮೆ ನೀಡಬೇಕು. ಘಟನೆ ನಡೆಯುವ ಮೂರು – ನಾಲ್ಕು ದಿನದ ಮುಂಚಿತವಾಗಿ ಅವರು ನಾಗಮಂಗಲಕ್ಕೆ ಬಂದಿದ್ದರು. ಮುಸ್ಮಿಂ ಗುಂಡಾಗಳಿಗೆ ಹೇಳುತ್ತಿದ್ದೇನೆ, ಕೈಯಲ್ಲಿ ಕಲ್ಲು ಹಿಡಿಯಲು ತಲವಾರು ಹಿಡಿಯಲು ಹಿಂದೂ ಸಮಾಜಕ್ಕೆ ಗೊತ್ತಿಲ್ಲ ಅಂದುಕೊಳ್ಳಬೇಡಿ. ಮುಂಬರುವ ಗಣೇಶನ ಮೆರವಣಿಗೆ ಸೇರಿದಂತೆ ಇನ್ನಿತರ ಹಿಂದೂ ಧಾರ್ಮಿಕ ಕಾರ್ಯಕ್ರಮ ಮೆರವಣಿಗೆಗೆ ತಲವಾರು ಸಮೇತ 50 ಮಂದಿ ಶ್ರೀರಾಮ‌ಸೇನೆಯ ಕಾರ್ಯಕರ್ತರು ರಕ್ಷಣೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ‌ ನಿರ್ಧಾರ ಕೈಗೊಳ್ಳಲಾಗಿದೆ. ಈ ರಾಜ್ಯ ಸರಕಾರದಿಂದ ನಮಗೆ ರಕ್ಷಣೆ ಇಲ್ಲ ಅನ್ನೋದು ಸಾಬೀತಾಗಿದೆ. ಅದಕ್ಕೆ ನಾವೇ ರಕ್ಷಣೆಗೆ ಶಸ್ತ್ರ ಹಿಡಿಯುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:10 pm, Sun, 22 September 24

Follow us on