ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ, ರಾಜ್ಯದಲ್ಲೂ ಕಾವೇರಿ ಆರತಿಗೆ ಚಿಂತನೆ
ಶುಕ್ರವಾರ ರಾತ್ರಿ ಕಾಂಗ್ರೆಸ್ ನಿಯೋಗ ವಾರಣಾಸಿಯಲ್ಲಿ ಗಂಗಾ ಆರತಿ ಕಾರ್ಯಕ್ರಮ ವೀಕ್ಷಣೆ ಮಾಡಿದೆ. ಈ ವೇಳೆ ಚಲುವರಾಯಸ್ವಾಮಿ ಹಾಗೂ ನರೇಂದ್ರ ಸ್ವಾಮಿ ಅವರು ಭಕ್ತಿಯಿಂದ ಗಂಗಾ ಮಾತೆಗೆ ಕೈ ಮುಗಿದಿದ್ದಾರೆ. ಗಂಗಾರತಿ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಕಾವೇರಿ ಆರತಿಗೆ ಆಲೋಚನೆ ನಡೆಸಲಾಗಿದ್ದು, ಈ ಬಗ್ಗೆ ಅಧ್ಯಯನ ನಡೆಸಲು ಕಾಂಗ್ರೆಸ್ ಸಮಿತಿಯ ಸದಸ್ಯರು ವಾರಣಾಸಿಗೆ ತೆರಳಿದ್ದಾರೆ.
ಬೆಂಗಳೂರು, ಸೆ.22: ವಾರಣಾಸಿಯ ಗಂಗಾ ಆರತಿ (Ganga Aarti) ಮಾದರಿಯಲ್ಲಿ ರಾಜ್ಯದಲ್ಲಿ ಕಾವೇರಿ ಆರತಿ (Cauvery Aarti) ನಡೆಸಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಅಧ್ಯಯನ ನಡೆಸಲು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಹರಿದ್ವಾರಕ್ಕೆ ತೆರಳಿದೆ. ಮೊನ್ನೆ ಶುಕ್ರವಾರ ರಾತ್ರಿ ಕಾಂಗ್ರೆಸ್ ನಿಯೋಗ ಗಂಗಾ ಆರತಿ ಕಾರ್ಯಕ್ರಮ ವೀಕ್ಷಣೆ ಮಾಡಿದೆ. ಈ ವೇಳೆ ಚಲುವರಾಯಸ್ವಾಮಿ ಹಾಗೂ ನರೇಂದ್ರ ಸ್ವಾಮಿ ಅವರು ಭಕ್ತಿಯಿಂದ ಗಂಗಾ ಮಾತೆಗೆ ಕೈ ಮುಗಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ