ನಾಗಮಂಗಲ ಗಲಭೆ ಕೇಸ್​: ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕ ಸಾವು

ಗಣೇಶನ ಮೂರ್ತಿ ವಿಸರ್ಜನೆ ವೇಳೆ ಗಲಭೆ ನಡೆದು ನಾಗಮಂಗಲ ಹೊತ್ತಿ ಉರಿದಿತ್ತು. ಇದೀಗ ನಾಗಮಂಗಲ ಸಹಜಸ್ಥಿತಿಯತ್ತ ಬಂದಿದೆ. ಬಂಧನದ ಭೀತಿಯಲ್ಲಿ ಗ್ರಾಮವನ್ನ ತೊರೆದಿದ್ದ ಹಲವು ಯುವಕರು ಇಂದಿಗೂ ಗ್ರಾಮಕ್ಕೆ ವಾಪಾಸ್ ಆಗಿಲ್ಲ. ಈ ಮಧ್ಯೆ ಬಂಧನ ಭೀತಿಯಲ್ಲಿ ಗ್ರಾಮವನ್ನ ತೊರೆದಿದ್ದ ಬದ್ರಿಕೊಪ್ಪಲು ಗ್ರಾಮದ ಯುವಕನೋರ್ವ ಸಾವನ್ನಪ್ಪಿದ್ದಾನೆ.

ನಾಗಮಂಗಲ ಗಲಭೆ ಕೇಸ್​: ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕ ಸಾವು
ನಾಗಮಂಗಲ ಗಲಭೆ ಕೇಸ್​: ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕ ಸಾವು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Sep 21, 2024 | 4:22 PM

ಮಂಡ್ಯ, ಸೆಪ್ಟೆಂಬರ್​ 21: ಜಿಲ್ಲೆಯ ನಾಗಮಂಗಲದಲ್ಲಿ ಗಲಭೆ ಪ್ರಕರಣಕ್ಕೆ (Nagamangala Riot Case) ಸಂಬಂಧಿಸಿದಂತೆ ಸದ್ಯ 52 ಆರೋಪಿಗಳ ಬಂಧನವಾಗಿದೆ. ಬಂಧನದ ಭೀತಿಯಿಂದ ಕೆಲ ಯುವಕರು ಊರು ತೊರೆದಿದ್ದು, ಮನೆ ಮಂದಿ ಕಣ್ಣೀರು ಹಾಕುತ್ತಿದ್ದಾರೆ. ಗಲಭೆಗೆ ಕಾರಣವಾದ ಬದ್ರಿಕೊಪ್ಪಲು ಗ್ರಾಮದ 13 ಮಂದಿ ಅರೆಸ್ಟ್ ಆಗಿದ್ದಾರೆ. ಇದೀಗ ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕನೋರ್ವ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬ್ರೈನ್ ಸ್ಟ್ರೋಕ್​ನಿಂದ ಕಿರಣ್(23) ಮೃತಪಟ್ಟಿದ್ದಾರೆ.

ಹೌದು. ಜಿಲ್ಲೆಯ ನಾಗಮಂಗಲ ತಾಲೂಕಿನ ಬದ್ರಿಕೊಪ್ಪಲು ಗ್ರಾಮದ ನಿವಾಸಿ ಕಿರಣ್​ ಸೆಪ್ಟೆಂಬರ್ 11ರ ರಾತ್ರಿ ಗಲಭೆ ನಂತರ ಗ್ರಾಮ ತೊರೆದಿದ್ದ. ಆದರೆ ನಿನ್ನೆ ಕಿರಣ್​ಗೆ ಬ್ರೈನ್ ಸ್ಟ್ರೋಕ್ ಆಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಮಂಡ್ಯ ನಾಗಮಂಗಲ ಗಲಭೆ ಪ್ರಕರಣ: ಮತ್ತೊಬ್ಬ ಅಧಿಕಾರಿಯ ತಲೆದಂಡ

ಕಿರಣ್ ತಂದೆ ಕುಮಾರ್​ರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ನಾಗಮಂಗಲ ಗಲಭೆ ಕೇಸ್​ನಲ್ಲಿ ಕುಮಾರ್ 17ನೇ ಆರೋಪಿಯಾಗಿದ್ದಾರೆ. ಸದ್ಯ ಮಂಡ್ಯ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶವ ಸ್ಥಳಾಂತರ ಮಾಡಲಾಗಿದ್ದು, ಇದೀಗ ಕಿರಣ್ ಮೃತದೇಹ ಗ್ರಾಮಕ್ಕೆ ಆಗಮಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಂದಹಾಗೆ ಪ್ರಕರಣ ಸಂಬಂಧ ಬದ್ರಿಕೊಪ್ಪಲು ಗ್ರಾಮದ ಹಲವರ ಬಂಧನವಾಗಿದ್ದರೆ, ಮತ್ತೊಂದು ಕಡೆ 25 ಕ್ಕೂ ಹೆಚ್ಚು ಯುವಕರು ಗ್ರಾಮ ತೊರೆದಿದ್ದಾರೆ. ಹೀಗಾಗಿ ಯುವಕರ ಕುಟುಂಬಸ್ಥರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಕದಬಹಳ್ಳಿ ಗ್ರಾಮದ ರೈತರು ಗ್ರಾಮಕ್ಕೆ ಭೇಟಿ ನೀಡಿ 20ಕ್ಕೂ ಹೆಚ್ಚು ಕುಟುಂಬಗಳಿಗೆ ತಮ್ಮ ಕೈಲಾದ ಮಟ್ಟಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ನಾಗಮಂಗಲ ಗಲಭೆ ಪ್ರಕರಣ: ಬಂಧಿತ ಆರೋಪಿಗಳ ಕುಟುಂಬಕ್ಕೆ ಹೆಚ್​ಡಿಕೆ ಆರ್ಥಿಕ ಸಹಾಯ

ಬಂಧನಕ್ಕೆ ಒಳಗಾಗಿ ಮಂಡ್ಯ ಜಿಲ್ಲಾ ಕಾರಗೃಹದಲ್ಲಿರುವ ಹಿಂದೂಗಳನ್ನ ಭೇಟಿ ಮಾಡಲು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮುಂದಾಗಿದ್ದರು. ಆದರೆ ಜಿಲ್ಲೆಗೆ ಬರುವ ಮೊದಲೇ ಮಂಡ್ಯ ಜಿಲ್ಲೆಗೆ ಬರದಂತೆ ಆದೇಶವನ್ನ ಹೊರಡಿಸಿ, ಮಂಡ್ಯ ಜಿಲ್ಲೆಯ ಗಡಿ, ನಿಡಗಟ್ಟ ಬಳಿಯೇ ಪೊಲೀಸರು ತಡೆದು ಆದೇಶದ ಪ್ರತಿ ತೋರಿಸಿ ಜಿಲ್ಲಾ ಪ್ರವೇಶಕ್ಕೆ ಬ್ರೇಕ್ ಹಾಕಿದ್ದರು. ಹೀಗಾಗಿ ಸರ್ಕಾರದ ವಿರುದ್ಧ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:18 pm, Sat, 21 September 24

ನಮಗೆ ರಾಜಕೀಯ ಸಂಸ್ಕಾರವಿದೆ, ಸಂಡೂರಲ್ಲಿ ಪತ್ನಿ ಗೆಲ್ಲೋದು ಶತಸಿದ್ಧ: ಸಂಸದ
ನಮಗೆ ರಾಜಕೀಯ ಸಂಸ್ಕಾರವಿದೆ, ಸಂಡೂರಲ್ಲಿ ಪತ್ನಿ ಗೆಲ್ಲೋದು ಶತಸಿದ್ಧ: ಸಂಸದ
ವಿಶಿಷ್ಟ ಶೈಲಿಯಲ್ಲಿ ಯೋಗೇಶ್ವರ್ ಪರ ಮತ ಯಾಚಿಸಿದ ಶಾಸಕ ಪ್ರದೀಪ್ ಈಶ್ವರ್
ವಿಶಿಷ್ಟ ಶೈಲಿಯಲ್ಲಿ ಯೋಗೇಶ್ವರ್ ಪರ ಮತ ಯಾಚಿಸಿದ ಶಾಸಕ ಪ್ರದೀಪ್ ಈಶ್ವರ್
ಲಾರಿ ಹಾಗೂ ಬಸ್​ ಮಧ್ಯೆ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಲಾರಿ ಹಾಗೂ ಬಸ್​ ಮಧ್ಯೆ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ವಕ್ಫ್ ಜಮೀನು ಅತಿಕ್ರಮಣಕಾರರಲ್ಲಿ ಶೇಕಡ 90 ಮುಸಲ್ಮಾನರು: ಜಮೀರ್ ಅಹ್ಮದ್
ವಕ್ಫ್ ಜಮೀನು ಅತಿಕ್ರಮಣಕಾರರಲ್ಲಿ ಶೇಕಡ 90 ಮುಸಲ್ಮಾನರು: ಜಮೀರ್ ಅಹ್ಮದ್
ಭಾರವಾದ ಹೃದಯ ಹೊತ್ತು ಬಿಗ್​ಬಾಸ್​ಗೆ ಮರಳಿದ ಸುದೀಪ್, ತಾಯಿಗೆ ಶ್ರದ್ಧಾಂಜಲಿ
ಭಾರವಾದ ಹೃದಯ ಹೊತ್ತು ಬಿಗ್​ಬಾಸ್​ಗೆ ಮರಳಿದ ಸುದೀಪ್, ತಾಯಿಗೆ ಶ್ರದ್ಧಾಂಜಲಿ
ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತ ಸಾಧಿಸುವ ಜರೂರತ್ತಿದೆ: ಪ್ರಲ್ಹಾದ್ ಜೋಶಿ
ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತ ಸಾಧಿಸುವ ಜರೂರತ್ತಿದೆ: ಪ್ರಲ್ಹಾದ್ ಜೋಶಿ
ಮಾಧ್ಯಮದವರಿಗೆ ಎಲ್ಲ ವಿಷಯ ಗೊತ್ತಿರುತ್ತೆ ಎಂದು ನಗಲಾರಂಭಿಸಿದ ಕುಮಾರಸ್ವಾಮಿ
ಮಾಧ್ಯಮದವರಿಗೆ ಎಲ್ಲ ವಿಷಯ ಗೊತ್ತಿರುತ್ತೆ ಎಂದು ನಗಲಾರಂಭಿಸಿದ ಕುಮಾರಸ್ವಾಮಿ
ಗಂಗರಾಳಿದ ಚನ್ನಪಟ್ಟಣ ಜನರಲ್ಲಿ ನಾಯಕತ್ವದ ಗುಣ ಇರೋದು ಸ್ವಾಭಾವಿಕ:ಯೋಗೇಶ್ವರ್
ಗಂಗರಾಳಿದ ಚನ್ನಪಟ್ಟಣ ಜನರಲ್ಲಿ ನಾಯಕತ್ವದ ಗುಣ ಇರೋದು ಸ್ವಾಭಾವಿಕ:ಯೋಗೇಶ್ವರ್
ಕುಮಾರಸ್ವಾಮಿ ಚುನಾವಣೆ ಸಮಯುದಲ್ಲಿ ಮಾತ್ರ ಕಣ್ಣೀರು ಸುರಿಸೋದು: ಶಿವಕುಮಾರ್
ಕುಮಾರಸ್ವಾಮಿ ಚುನಾವಣೆ ಸಮಯುದಲ್ಲಿ ಮಾತ್ರ ಕಣ್ಣೀರು ಸುರಿಸೋದು: ಶಿವಕುಮಾರ್
ಜನರ ಸಮಸ್ಯೆ ನೋಡಿ ನೋವಿನಿಂದ ಹಲವಾರು ಬಾರಿ ಅತ್ತಿದ್ದೇನೆ: ಕುಮಾರಸ್ವಾಮಿ
ಜನರ ಸಮಸ್ಯೆ ನೋಡಿ ನೋವಿನಿಂದ ಹಲವಾರು ಬಾರಿ ಅತ್ತಿದ್ದೇನೆ: ಕುಮಾರಸ್ವಾಮಿ