ಶ್ರೀರಾಮ ತಂದೆಗೆ ಹುಟ್ಟಿಲ್ಲ, ಆತ ದಶರಥನ ಮಗನೇ ಅಲ್ಲ: ಮತ್ತೆ ವಿವಾದದ ಕಿಡಿ ಹೊತ್ತಿಸಿದ ಭಗವಾನ್

| Updated By: ಗಂಗಾಧರ​ ಬ. ಸಾಬೋಜಿ

Updated on: Jun 10, 2024 | 3:48 PM

ಸಾಹಿತಿ ಪ್ರೊ. ಕೆ ಭಗವಾನ್ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಂದು ಹೊಸ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ದಾವಣಗೆರೆಯ ಹರಿಹರ ತಾಲೂಕಿನ ಹಣಗವಾಡಿ ಬಳಿ ಇರುವ ಪ್ರೊ. ಕೃಷ್ಣಪ್ಪ ಭವನದಲ್ಲಿ ನಿನ್ನೆ‌ ನಡೆದ ಡಾ. ಅಂಬೇಡ್ಕರ್, ಕೃಷ್ಣಪ್ಪ‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀರಾಮ ತಂದೆಗೆ ಹುಟ್ಟಿಲ್ಲ. ಆತ ದಶರಥನ ಮಗನೇ ಅಲ್ಲ ಎಂದಿದ್ದಾರೆ.

ದಾವಣಗೆರೆ, ಜೂನ್​ 10: ಶ್ರೀರಾಮ (Shri Ram) ತಂದೆಗೆ ಹುಟ್ಟಿಲ್ಲ. ಆತ ದಶರಥನ ಮಗನೇ ಅಲ್ಲ ಎಂದು ಸಾಹಿತಿ ಪ್ರೊ. ಕೆ ಭಗವಾನ್ (K Bhagawan) ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮೈಮೇಲೆ ಎಳೆದುಕೊಂಡಿದ್ದಾರೆ. ಸದ್ಯ ಭಗವಾನ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದಾವಣಗೆರೆಯ ಹರಿಹರ ತಾಲೂಕಿನ ಹಣಗವಾಡಿ ಬಳಿ ಇರುವ ಪ್ರೊ. ಕೃಷ್ಣಪ್ಪ ಭವನದಲ್ಲಿ ನಿನ್ನೆ‌ ನಡೆದ ಡಾ. ಅಂಬೇಡ್ಕರ್, ಕೃಷ್ಣಪ್ಪ‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಶ್ರೀರಾಮ ದಶರಥನಿಗೆ ಹುಟ್ಟೇ ಇಲ್ಲ, ಬದಲಾಗಿ ಪುರೋಹಿತರಿಗೆ ಹುಟ್ಟಿದವನು. ಇದು ವಾಲ್ಮೀಕಿ ರಾಮಾಯಣದಲ್ಲೇ ಇದೇ ಓದಿಕೊಳ್ಳಿ ಎಂದು ಹೇಳಿದ್ದಾರೆ. ಮಹಾಭಾರತಕ್ಕೆ ಬಂದರೆ ಪಾಂಡವರು ತಂದೆಗೆ ಹುಟ್ಟಿದವರಲ್ಲ. ಬೇರೆ ಬೇರೆ ದೇವರಿಗೆ ಹುಟ್ಟಿದವರು. ರಾಮ ರಾಜ್ಯಭಾರ ಮಾಡೇ ಇಲ್ಲ. ರಾಮನ ತಮ್ಮ ಭರತ ರಾಜ್ಯಭಾರ ಮಾಡಿದ್ದ. ರಾಮ ಬೆಳಿಗ್ಗೆ ಪುರೋಹಿತರ ಜೊತೆ ಸೇರಿ ಪೂಜೆ ಮಾಡುತ್ತಿದ್ದ. ಮಧ್ಯಾಹ್ನ ಆದರೆ ಸಾಕು ಹುಡುಗಿಯರ ಜೊತೆ ಸೇರಿ ಹೆಂಡ ಕುಡಿಯುತ್ತಿದ್ದ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on