ಅಯೋಧ್ಯೆಯಲ್ಲಿ ಮತ್ತೆ ನೆಲೆ ನಿಂತ ಶ್ರೀರಾಮಚಂದ್ರ! ರಾತ್ರಿ ವೇಳೆ ಹೇಗೆ ಕಾಣುತ್ತೆ ನೋಡಿ

Updated on: Jan 22, 2024 | 11:12 PM

ಭಾರತಕ್ಕೆ ಭಾರತವೇ ನಿರೀಕ್ಷಿಸುತ್ತಿದ್ದ, ಅಸಂಖ್ಯ ರಾಮ ಭಕ್ತರು ಎದುರು ನೋಡ್ತಿದ್ದ ರಾಮ ಮಂದಿರ ಲೋಕಾರ್ಪಣೆ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ಸಂಪನ್ನಗೊಂಡಿದೆ. ರಾಮ ಮಂದಿರವನ್ನ ಸ್ವರ್ಗದಂತೆ ಅಲಂಕಾರ ಮಾಡಲಾಗಿತ್ತು. ಇನ್ನು ರಾತ್ರಿ ವೇಳೆ ರಾಮಲಲ್ಲಾ ಮೂರ್ತಿ ಹೇಗೆ ಕಾಣುತ್ತೆ ಎಂದು ವಿಡಿಯೋ ನೋಡಿ. 

ಒಂದಲ್ಲ ಎರಡಲ್ಲ ಬರೋಬ್ಬರಿ 500 ವರ್ಷಗಳ ಕಾಯುವಿಕೆ ಕೊನೆಯಾಗಿದೆ. ಅಸಂಖ್ಯ ರಾಮಭಕ್ತರ ಶತಮಾನಗಳ ಕನಸು ಈಡೇರಿದೆ. ರಾಮ ಜನ್ಮಭೂಮಿ ಅಯೋಧ್ಯೆ (Ayodhya) ಯಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು, ಅದೇ ರಾಮ ಮಂದಿರದಲ್ಲಿ ಇಂದು ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಪ್ರಧಾನಿ ಮೋದಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯನ್ನ ನೆರೆವೇರಿಸಿದ್ದಾರೆ. ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ರಾಮ ಮಂದಿರವನ್ನ ಸ್ವರ್ಗದಂತೆ ಅಲಂಕಾರ ಮಾಡಲಾಗಿತ್ತು. ವಿವಿಧ ಹೂವುಗಳು ಮತ್ತು ವಿದ್ಯುತ್​ ದೀಪಗಳಿಂದ ಅಯೋಧ್ಯೆ ರಾಮಮಂದಿರವನ್ನು ಅಲಂಕರಿಸಲಾಗಿದೆ. ಇನ್ನು ರಾತ್ರಿ ವೇಳೆ ರಾಮಲಲ್ಲಾ ಮೂರ್ತಿ ಹೇಗೆ ಕಾಣುತ್ತೆ ಎಂದು ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Loading...
Unable to load recommendations.
Follow Us
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More