ಹುಬ್ಬಳ್ಳಿ ಮರ್ಯಾದೆ ಹತ್ಯೆ: ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಕೆಂಡಾಮಂಡಲ
ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಮರ್ಯಾದೆ ಹತ್ಯೆಯನ್ನು ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅಂಬೇಡ್ಕರ್ ಕನಸು ಇನ್ನು ನನಸಾಗಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ಹೊಡೆದವರಿಗೆ ಹೃದಯವಿಲ್ಲ, ರಾಕ್ಷಸರು ಅವರು. ಸರ್ಕಾರ ಕೂಡಾ ಈ ಬಗ್ಗೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ.ಸ್ವಂತ ಮಗಳು ಗರ್ಭಿಣಿಯಾದ್ರು ತಂದೆ ಕೊಲೆ ಮಾಡಿದ್ದಾನೆ. ಗರ್ಭಿಣಿ ಹೊಟ್ಟೆಗೆ ಕೊಡಲಿ ಹಾಕಿರೋನು ರಾಕ್ಷಸ. ಅವರನ್ನು ಜೈಲಿಗೆ ಹಾಕೋ ಅವಶ್ಯಕತೆ ಇಲ್ಲ.ಬದಲಿಗೆ ಶೂಟ್ ಮಾಡಬೇಕು. ದಲಿತರು ಪ್ರೀತಿನೇ ಮಾಡಬಾರದಾ? ಇಂತಹ ಘಟನೆ ಎಂದಿಗೂ ಆಗದಂತಹ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿ, (ಡಿಸೆಂಬರ್ 25): ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಗರ್ಭಿಣಿ ಪುತ್ರಿ ಮಾನ್ಯಗಳನ್ನು ತಂದೆಯೇ ಕೊಚ್ಚಿ ಕೊಂದಿದ್ದಾನೆ. ದಲಿತ ಹುಡುಗನ ಮದುವೆಯಾಗಿದ್ದಕ್ಕೆ ಈ ಮರ್ಯಾದೆ ಹತ್ಯೆ ನಡೆದಿದೆ. ಇನ್ನು ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ತಂದೆಯ ಕೃತ್ಯಕ್ಕೆ ಆಕ್ರೋಗಳು ವ್ಯಕ್ತವಾಗುತ್ತಿವೆ. ಇನ್ನು ಕೆಲವರು ಹೆತ್ತು ಹೊತ್ತು ಬೆಳೆಸಿದ ಮಗಳು ಈ ರೀತಿ ಮಾರ್ಯದೆ ತೆಗೆದಿದ್ದು ಎಷ್ಟು ಸರಿ ಎಂದು ಕೊಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಮರ್ಯಾದೆ ಹತ್ಯೆಯನ್ನು ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅಂಬೇಡ್ಕರ್ ಕನಸು ಇನ್ನು ನನಸಾಗಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ಹೊಡೆದವರಿಗೆ ಹೃದಯವಿಲ್ಲ, ರಾಕ್ಷಸರು ಅವರು. ಸರ್ಕಾರ ಕೂಡಾ ಈ ಬಗ್ಗೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ.ಸ್ವಂತ ಮಗಳು ಗರ್ಭಿಣಿಯಾದ್ರು ತಂದೆ ಕೊಲೆ ಮಾಡಿದ್ದಾನೆ. ಗರ್ಭಿಣಿ ಹೊಟ್ಟೆಗೆ ಕೊಡಲಿ ಹಾಕಿರೋನು ರಾಕ್ಷಸ. ಅವರನ್ನು ಜೈಲಿಗೆ ಹಾಕೋ ಅವಶ್ಯಕತೆ ಇಲ್ಲ.ಬದಲಿಗೆ ಶೂಟ್ ಮಾಡಬೇಕು. ದಲಿತರು ಪ್ರೀತಿನೇ ಮಾಡಬಾರದಾ? ಇಂತಹ ಘಟನೆ ಎಂದಿಗೂ ಆಗದಂತಹ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
