Tulip Garden: ಶ್ರೀನಗರದ ಖ್ಯಾತ ಇಂದಿರಾ ಗಾಂಧಿ ಟ್ಯೂಲಪ್ ಉದ್ಯಾನವನವನ್ನು ಸಾರ್ಜಜನಿಕರ ಭೇಟಿಗೆ ಮುಕ್ತಗೊಳಿಸಲಾಗಿದೆ!

Tulip Garden: ಶ್ರೀನಗರದ ಖ್ಯಾತ ಇಂದಿರಾ ಗಾಂಧಿ ಟ್ಯೂಲಪ್ ಉದ್ಯಾನವನವನ್ನು ಸಾರ್ಜಜನಿಕರ ಭೇಟಿಗೆ ಮುಕ್ತಗೊಳಿಸಲಾಗಿದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 21, 2023 | 7:50 AM

ಜಮ್ಮು ಪ್ರಾಂತ್ಯದಲ್ಲಿರುವ ನೂತನ ಸನ್ಸಾರ್ ಟ್ಯೂಲಪ್ ಉದ್ಯಾನವನನ್ನು ಏಪ್ರಿಲ್ ನಲ್ಲಿ ಸಾರ್ವಜನಿಕರ ಭೇಟಿಗೆ ಮುಕ್ತ ಮಾಡಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಹೇಳಿದರು. ಈ ಉದ್ಯಾವನದಲ್ಲಿ 25 ಟ್ಯೂಲಪ್ ಪ್ರಜಾತಿಯ 2.75 ಸಸಿಗಳಿವೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ್ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರವಿವಾರದಂದು ಏಷ್ಯಾದಲ್ಲೇ ಅತಿದೊಡ್ಡದೆನಿಸಿಕೊಂಡಿರುವ ಶ್ರೀನಗರದ ಇಂದಿರಾ ಗಾಂಧಿ ಟ್ಯೂಲಪ್ ಉದ್ಯಾನವನವನ್ನು ಸಾರ್ಜಜನಿಕರ ಭೇಟಿಗೆ ಮುಕ್ತಗೊಳಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿನ್ಹಾ, ‘ಕಳೆದ ವರ್ಷ ಸುಮಾರು 3.6 ಲಕ್ಷ ಜನ ಟ್ಯೂಲಪ್ ಉದ್ಯಾನವನ ನೋಡಲು ಆಗಮಿಸಿದ್ದರು. 2008 ರಿಂದ ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುವ ಜನರ ಸಂಖ್ಯೆಯನ್ನು ಗಮನಿಸಿದ್ದೇಯಾದರೆ, ಇದು ದಾಖಲೆಯೆನಿಸಲಿದೆ. ಈ ವರ್ಷ ಉದ್ಯಾನವನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ ಎಂಬ ವಿಶ್ವಾಸ ನನಗಿದೆ,’ ಎದು ಹೇಳಿದರು.

ಟ್ಯೂಲಪ್ ಪ್ರಜಾತಿಗೆ ಸೇರಿದ 68 ಬಗೆಯ ಸುಮಾರು 15 ಲಕ್ಷ ಟ್ಯೂಲಪ್ ಹೂಗಿಡಗಳು ಉದ್ಯಾನವನದಲ್ಲಿವೆ. ಇದನ್ನು ಸಿರಾಜ್ ಬಾಗ್ ಅಂತಲೂ ಕರೆಯುತ್ತಾರೆ. ಉದ್ಯಾನವನದಲ್ಲಿ ಟ್ಯೂಲಪ್ ಅಲ್ಲದೆ ಹೇಸಿಂತ್, ಡಫೋಡಿಲ್, ಮುಸ್ಕಾರಿ ಮತ್ತು ಸೈಕ್ಲಾಮೆನ್ ಹೂಗಿಡಗಳು ಸಹ ಇವೆ.

ಇದನ್ನೂಓದಿ: ಆಸ್ಟ್ರೇಲಿಯದ ಡಾರ್ಲಿಂಗ್ ನದಿಯಲ್ಲಿ ಲಕ್ಷಾಂತರ ಮೀನುಗಳು ಸಾವು; ವಿಡಿಯೋ ವೈರಲ್!

‘ಬಗೆಬಗೆಯ ಟ್ಯೂಲಪ್ ಹೂಗಳನ್ನು ನೋಡಿ ಬಹಳ ಸಂತೋಷವಾಗುತ್ತಿದೆ. ಕಳೆದೊಂದು ತಿಂಗಳಿಂದ ನಾವು ಈ ಸುದಿಕ್ಕಾಗಿ ಕಾಯತ್ತಿದ್ದೆವು. ನಾಳೆ ಬೆಳಗ್ಗೆ ನಮ್ಮ ಫ್ಲೈಟ್ ಇದೆ. ಹಾಗಾಗಿ ಅಷ್ಟರೊಳಗೆ ಗಾರ್ಡನ್ ಓಪನ್ ಆಗುತ್ತೋ ಇಲ್ವೋ ಎಂಬ ಆತಂಕವಂತೂ ಇತ್ತು. ನಾವು ಹೊರಡುವ ಮೊದಲು ಗಾರ್ಡನ್ ಓಪನ್ ಆಗಿದ್ದು ನಮ್ಮನ್ನು ರೋಮಾಂಚಿತರಾಗಿಸಿದೆ, ಇದೊಂದು ಅವಿಸ್ಮರಣೀಯ ಕ್ಷಣ,’ ಎಂದು ಪ್ರವಾಸಿಯೊಬ್ಬರು ಹೇಳಿದ್ದಾರೆ.

‘ಶ್ರೀನಗರಕ್ಕೆ ಭೇಟಿ ನೀಡಿದಾಗ ಟ್ಯೂಲಪ್ ಉದ್ಯಾನವನಗೆ ಭೇಟಿ ನೀಡುವುದನ್ನು ತಪ್ಪಿಸಲೇಬಾರದು. ನನಗೂ ನಾಳೆ ಫ್ಲೈಟ್ ಇರುವುದರಿಂದ ಗಾರ್ಡನ್ ಒಳಗೆ ಪ್ರವೇಶಿಸಲು ಅವಕಾಶ ಸಿಕ್ಕಿದ್ದು ಅದೃಷ್ಟವಲ್ಲದೆ ಮತ್ತೇನೂ ಅಲ್ಲ. ಕಾಶ್ಮೀರಕ್ಕೆ ಬಂದು ಟ್ಯೂಲಪ್ ಉದ್ಯಾನವನ ನೋಡದೆ ವಾಪಸ್ಸು ಹೋದರೆ ನಿಮ್ಮ ಪ್ರವಾಸ ನಿಶ್ಚಿತವಾಗಿಯೂ ಅಪೂರ್ಣವೆನಿಸುತ್ತದೆ,’ ಅಂತ ಇನ್ನೊಬ್ಬ ಪ್ರವಾಸಿ ಹೇಳಿದ್ದಾರೆ.

ಜಮ್ಮು ಪ್ರಾಂತ್ಯದಲ್ಲಿರುವ ನೂತನ ಸನ್ಸಾರ್ ಟ್ಯೂಲಪ್ ಉದ್ಯಾನವನನ್ನು ಏಪ್ರಿಲ್ ನಲ್ಲಿ ಸಾರ್ವಜನಿಕರ ಭೇಟಿಗೆ ಮುಕ್ತ ಮಾಡಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಹೇಳಿದರು. ಈ ಉದ್ಯಾವನದಲ್ಲಿ 25 ಟ್ಯೂಲಪ್ ಪ್ರಜಾತಿಯ 2.75 ಸಸಿಗಳಿವೆ.

‘ಏಪ್ರಿಲ್ ನಲ್ಲಿ ಜಮ್ಮು ಪ್ರದೇಶದಲ್ಲಿರುವ ಸನ್ಸಾರ್ ಟ್ಯೂಲಪ್ ಉದ್ಯಾನವನದ ಪ್ರವೇಶದ್ವಾರಗಳನ್ನು ಸಾರ್ವಜನಿಕರಿಗಾಗಿ ಓಪನ್ ಮಾಡಲಾಗುವುದು. ಮುಂದಿನ 10 ದಿನಗಳಲ್ಲಿ ಶ್ರೀನಗರದ ಚಿತ್ರಣವೇ ಬದಲಾಗಲಿದೆ. ಈ ಉದ್ಯಾನವನಲ್ಲಿ 2.75 ಲಕ್ಷ ಟ್ಯೂಲಪ್ ಹೂವಿನ ಸಸಿಗಳನ್ನು ನೆಡಲಾಗಿದೆ,’ ಎಂದು ಸಿನ್ಹಾ ಹೇಳಿದರು.

ಇದನ್ನೂಓದಿ: 5, 8ನೇ ತರಗತಿ ಬೋರ್ಡ್​ ಪರೀಕ್ಷೆ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ ಖಾಸಗಿ ಶಾಲೆಗಳ ಸಂಘ

ಶ್ರೀನಗರದಲ್ಲಿರುವ ಇಂದಿರಾ ಗಾಂಧಿ ಟ್ಯೂಲಪ್ ಉದ್ಯಾನವನನ್ನು 2008 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳಾಗಿದ್ದ ಗುಲಾಂ ನಬಿ ಆಜಾದ್ ಉದ್ಘಾಟಿಸಿದ್ದರು. ಶರತ್ಕಾಲ ಮತ್ತು ಬೇಸಿಗೆ ಕಾಲ ನಡುವಿನ ಸಮಯದಲ್ಲಿ ಪ್ರವಾಸಿಗರನ್ನು ಜಮ್ಮು ಮತ್ತು ಕಾಶ್ಮೀರದ ಕಡೆ ಸೆಳೆಯುವ ಉದ್ದೇಶದಿಂದ ಟ್ಯೂಲಪ್ ಉದ್ಯಾನವನನ್ನು ವಿನ್ಯಾಸಗೊಳಿಸಲಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ