
ಬೆಂಗಳೂರು: ಸಚಿವ ಬಿ. ಶ್ರೀರಾಮುಲು ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಿಎಸ್ವೈ ಮತ್ತು ರಾಮುಲು ಮಹತ್ವದ ಭೇಟಿಗೆ ಕೌಂಟ್ಡೌನ್ ಶುರುವಾಗಿದೆ. ಚಿಕ್ಕಜಾಲ ಬಳಿಯ ಫಾರ್ಮ್ಹೌಸ್ನಿಂದ ನೇರವಾಗಿ ಸಿಎಂ ನಿವಾಸಕ್ಕೆ ರಾಮುಲು ಹೊರಟುಬಂದಿದ್ದಾರೆ. ಇನ್ನೂ ಗರಂ ಆಗಿರೋ ಶ್ರೀರಾಮುಲು ಅವರನ್ನ ಮಾತುಕತೆ ನಡೆಸಿ ಮನವೊಲಿಕೆ ಮಾಡ್ತಾರಾ ಸಿಎಂ ಎಂದು ಕಾದು ನೋಡಬೇಕಿದೆ.
ಸುಧಾಕರ್ ಜೊತೆ ಸಂಧಾನ?
ಇದೇ ಸಂದರ್ಭದಲ್ಲಿ ಸಚಿವ ಸುಧಾಕರ್ ಕೂಡ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದರೊಂದಿಗೆ ರಾಮುಲು-ಸುಧಾಕರ್ ಮಧ್ಯೆ ಸಂಧಾನ ನಡೆಸುತ್ತಾರಾ ಸಿಎಂ ಯಡಿಯೂರಪ್ಪ ಎಂಬ ಉತೂಹಲವೂ ಮೂಡಿದೆ.
Published On - 10:21 am, Tue, 13 October 20