ಜನರನ್ನು ನಗಿಸುವುದೇ ‘ಜಿಎಸ್ಟಿ’ ಉದ್ದೇಶ: ಸೃಜನ್ ಲೋಕೇಶ್
‘ಮಜಾ ಟಾಕೀಸ್’ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ ಸೃಜನ್ ಲೋಕೇಶ್ ಅವರು ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರ ನಿರ್ದೇಶನದಲ್ಲಿ ‘ಜಿಎಸ್ಟಿ’ ಸಿನಿಮಾ ಮೂಡಿಬಂದಿದೆ. ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾ ಬಗ್ಗೆ ಅವರು ಮಾತನಾಡಿದ್ದಾರೆ.
‘ಮಜಾ ಟಾಕೀಸ್’ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ ಸೃಜನ್ ಲೋಕೇಶ್ (Srujan Lokesh) ಅವರು ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರ ನಿರ್ದೇಶನದಲ್ಲಿ ‘ಜಿಎಸ್ಟಿ’ ಸಿನಿಮಾ (GST Movie) ಮೂಡಿಬಂದಿದೆ. ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನೇ ಬರೆದ ಕಥೆ. ನಿರ್ದೇಶನ ಮಾಡುವುದು ಚಾಲೆಂಜಿಂಗ್ ಆಗಿತ್ತು. ಸಿನಿಮಾ ನೋಡಿದಾಗ ಸಮಾಧಾನ ಆಗುತ್ತದೆ. ಜನರನ್ನು ನಗಿಸಬೇಕು ಎಂಬುದು ನನ್ನ ಉದ್ದೇಶ. ಜನರು ನಗದೇ ಇದ್ದರೆ ನಾನು ನನ್ನ ಕೆಲಸಕ್ಕೆ ಸರಿಯಾಗಿ ನ್ಯಾಯ ಕೊಟ್ಟಿಲ್ಲ ಎಂದಾಗುತ್ತದೆ. ಜನರು ಖಂಡಿತಾ ನನ್ನ ಸಿನಿಮಾ ನೋಡಿ ಖುಷಿಪಡುತ್ತಾರೆ ಎಂಬ ನಿರೀಕ್ಷೆ ನನಗೆ ಇದೆ. 2 ಗಂಟೆ 10 ನಿಮಿಷ ಇದೆ. ನಮ್ಮ ಸಿನಿಮಾವನ್ನು ನಾವೇ ಅದ್ಭುತವಾಗಿದೆ ಅಂತ ಹೇಳಿಕೊಳ್ಳುವುದು ಸರಿಯಲ್ಲ. ಜನರು ಸಿನಿಮಾ ನೋಡಲಿ. ಚೆನ್ನಾಗಿದ್ದರೆ ಹೊಗಳಲಿ. ಚೆನ್ನಾಗಿಲ್ಲ ಎಂದರೆ ತಿದ್ದಿಕೊಳ್ಳುತ್ತೇವೆ’ ಎಂದು ಸೃಜನ್ ಲೋಕೇಶ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
