ಹೊಸ ರಿಯಾಲಿಟಿ ಶೋ ಮೂಲಕ ಬಂದ ಸೃಜನ್ ಲೋಕೇಶ್; ಬಿಗ್ ಬಾಸ್ ಬಳಿಕ ಪ್ರಸಾರ

Edited By:

Updated on: Jan 07, 2026 | 1:25 PM

ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಹೊಸ ರಿಯಾಲಿಟಿ ಶೋ ಆರಂಭಿಸೋದು ವಾಡಿಕೆ. ಈ ಬಾರಿಯೂ ಅದು ಮುಂದುವರಿದಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಬಾರಿ ಯಾವ ರೀಯಾಲಿಟಿ ಶೋನ ಮಾಡಲಾಗುತ್ತಿದೆ? ಅದಕ್ಕೆ ಉತ್ತರ ಸಿಕ್ಕೇ ಬಿಟ್ಟಿದೆ. ಈ ಬಾರಿ ಸೃಜನ್ ಹೊಸ ರಿಯಾಲಿಟಿ ಶೋ ಮೂಲಕ ಬರ್ತಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಜನವರಿ 17 ಹಾಗೂ 18ರಂದು ಪ್ರಸಾರ ಕಾಣಲಿದೆ. ಈ ಶೋ ಮುಗಿದ ಬಳಿಕ ವೀಕೆಂಡ್​​ನಲ್ಲಿ ಪ್ರಸಾರ ಮಾಡೋಕೆ ಒಂದು ರಿಯಾಲಿಟಿ ಶೋ ಬೇಕಲ್ಲ. ಅದಕ್ಕೆ ಶೋ ಸಿದ್ಧವಾಗಿದೆ. ಸೃಜನ್ ಲೋಕೇಶ್ ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ಅದುವೇ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’. ಸೃಜನ್ ಲೋಕೇಶ್, ಸಾಧು ಕೋಕಿಲ ಹಾಗೂ ಶ್ರುತಿ ಶೋನ ನೇತೃತ್ವ ವಹಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.