ಪುನೀತ್ ನನ್ನನ್ನು ಕುಟುಂಬದವರ ರೀತಿ ಟ್ರೀಟ್ ಮಾಡಿದ್ದರು: ರಾಜಮೌಳಿ
ಪುನೀತ್ ಅಗಲಿ ಹಲವು ದಿನಗಳೇ ಆಗಿದ್ದರೂ ಎಲ್ಲರೂ ಶಾಕ್ನಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರನ್ನು ಇಲ್ಲೇ ಭೇಟಿ ಮಾಡಿದ್ದೆ. ಒಟ್ಟು ಎರಡು ಬಾರಿ ಮೀಟ್ ಮಾಡಿದ್ದೇನೆ ಅಷ್ಟೇ. ಆದರೂ, ಅವರು ಕುಟುಂಬದವರ ತರಹ ನನ್ನನ್ನು ಟ್ರಿಟ್ ಮಾಡಿದ್ದರು ಎಂದಿದ್ದಾರೆ ರಾಜಮೌಳಿ.
ಪುನೀತ್ ರಾಜ್ಕುಮಾರ್ ನಿವಾಸಕ್ಕೆ ರಾಜಮೌಳಿ ಭೇಟಿ ನೀಡಿದ್ದಾರೆ. ಪತ್ನಿ ರಮಾ ಜತೆ ಸದಾಶಿವನ ನಗರಕ್ಕೆ ತೆರಳಿದ ಅವರು ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಆ ನಂತರ ಮಾತನಾಡಿದ ರಾಜಮೌಳಿ, ‘ಪುನೀತ್ ಅಗಲಿ ಹಲವು ದಿನಗಳೇ ಆಗಿದ್ದರೂ ಎಲ್ಲರೂ ಶಾಕ್ನಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರನ್ನು ಇಲ್ಲೇ ಭೇಟಿ ಮಾಡಿದ್ದೆ. ಒಟ್ಟು ಎರಡು ಬಾರಿ ಮೀಟ್ ಮಾಡಿದ್ದೇನೆ ಅಷ್ಟೇ. ಆದರೂ, ಅವರು ಕುಟುಂಬದವರ ತರಹ ನನ್ನನ್ನು ಟ್ರಿಟ್ ಮಾಡಿದ್ದರು. ಒಬ್ಬ ಸ್ಟಾರ್ ಆಗಿ ನನ್ನ ಜೊತೆ ಮಾತನಾಡಲಿಲ್ಲ. ಅವರು ಮಾತನಾಡುವಾಗ ಯಾವಾಗಲೂ ತಗ್ಗಿಬಗ್ಗಿ ಮಾತನಾಡುತ್ತಿದ್ದರು. ತುಂಬಾ ನೋವು ಅಗುತ್ತದೆ. ಎಷ್ಟೆಲ್ಲ ಜನಕ್ಕೆ ಸಹಾಯ ಮಾಡುತ್ತಿದ್ದರು ಎಂಬುದು ಅವರ ನಿಧನದ ನಂತರ ಗೊತ್ತಾಯಿತು’ ಎಂದರು. ರಾಜಮೌಳಿ ಪತ್ನಿ ಕೂಡ ಈ ಸಂದರ್ಭದಲ್ಲಿದ್ದರು.
ಇದನ್ನೂ ಓದಿ: ಪುನೀತ್ ನಿವಾಸಕ್ಕೆ ಭೇಟಿ ನೀಡಿ ಅಶ್ವಿನಿಗೆ ರಾಜಮೌಳಿ ಸಾಂತ್ವನ; ಆರ್ಆರ್ಆರ್ ನಿರ್ದೇಶಕ ಹೇಳಿದ್ದೇನು?