ಕನ್ನಡ ರಾಜ್ಯೋತ್ಸವ: ಮೈಸೂರು ಕೆಎಸ್ಆರ್ಟಿಸಿ ವಿಭಾಗ ಸಿಬ್ಬಂದಿಯಿಂದ ವಿನೂತನ ಮತ್ತು ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವ ಆಚರಣೆ!
ಮೈಸೂರು ಕೆಎಸ್ ಆರ್ ಟಿಸಿ ವಿಭಾಗದ ಅಧಿಕಾರಿಗಳು ಹೇಳುವ ಪ್ರಕಾರ ಕನ್ನಡ ಪ್ರಖ್ಯಾತ ಕಾದಂಬರಿಕಾರ್ತಿ ತ್ರಿವೇಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಥೀಮ್ನಲ್ಲಿ ಬಸ್ಅನ್ನು ಸಿಂಗರಿಸಲಾಗಿದೆ. ಬಸ್ಸಿನ ಹಿಂಭಾಗದಲ್ಲಿ ತ್ರಿವೇಣಿ ಅವರು ಬರೆದಿರುವ ಕಾದಂಬರಿಗಳನ್ನು ಡಿಸ್ ಪ್ಲೇ ಮಾಡಲಾಗಿದೆ ಎಂದು ಒಬ್ಬ ಮಹಿಳಾ ಅಧಿಕಾರಿ ಹೇಳುತ್ತಾರೆ.
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೈಸೂರು ವಿಭಾಗದ ಅಧಿಕಾರಿಗಳು ವಿಶಿಷ್ಟವಾದ ರೀತಿಯಲ್ಲಿ 68ನೇ ಕನ್ನಡ ರಾಜ್ಯೋತ್ಸವ (Kannada Rajyotsava) ಆಚರಿಸಿದರು. ಸಾತಗ್ಹಳ್ಳಿ ಡಿಪೋದ ಒಂದು ಬಸ್ಸನ್ನು ಕನ್ನಡಾಂಬೆಯ (Kannadambe) ಸಾರೋಟಿನಂತೆ (chariot) ವಿನ್ಯಾಸಗೊಳಿಸಿ ಹಳದಿ ಮತ್ತು ಕೆಂಪು ಬಣ್ಣದ ಹೂಗಳಿಂದ ಅಲಂಕರಿಸಲಾಗಿದೆ. ಬಸ್ಸಿನ ಮುಂಭಾಗದಲ್ಲಿ ಒಬ್ಬ ಮಹಿಳೆಯನ್ನು ಕನ್ನಡಾಂಬೆಯಂತೆ ಸಿಂಗರಿಸಿ ಕುಳ್ಳರಿಸಲಾಗಿದೆ. ವಾಹನದ ಸುತ್ತ ಕನ್ನಡದ ಇತಿಹಾಸ, ಸಾಹಿತ್ಯ ಸಂಸ್ಕೃತಿ ಮತ್ತು ಪರಂಪರೆಯನ್ನ ವಿವರಿಸುವ ಫೋಟೋಗಳು. ಡಾ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಡಾ ಬಿಅರ್ ಅಂಬೇಡ್ಕರ್ ಸೇರಿದಂತೆ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತರಾದ ಕನ್ನಡ ವಿದ್ವಾಂಸರ ಪೋಟೋಗಳನ್ನು ಅಂಟಿಸಲಾಗಿದೆ.
ಮೈಸೂರು ಕೆಎಸ್ ಆರ್ ಟಿಸಿ ವಿಭಾಗದ ಅಧಿಕಾರಿಗಳು ಹೇಳುವ ಪ್ರಕಾರ ಕನ್ನಡ ಪ್ರಖ್ಯಾತ ಕಾದಂಬರಿಕಾರ್ತಿ ತ್ರಿವೇಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಥೀಮ್ನಲ್ಲಿ ಬಸ್ಅನ್ನು ಸಿಂಗರಿಸಲಾಗಿದೆ. ಬಸ್ಸಿನ ಹಿಂಭಾಗದಲ್ಲಿ ತ್ರಿವೇಣಿ ಅವರು ಬರೆದಿರುವ ಕಾದಂಬರಿಗಳನ್ನು ಡಿಸ್ ಪ್ಲೇ ಮಾಡಲಾಗಿದೆ ಎಂದು ಒಬ್ಬ ಮಹಿಳಾ ಅಧಿಕಾರಿ ಹೇಳುತ್ತಾರೆ. ಕನ್ನಡಾಂಬೆಯ ಮೆರವಣಿಗೆ ಡಿಪೋದಿಂದ ಸೆಂಟ್ರಲ್ ಬಸ್ ಟರ್ಮಿನಲ್ ತೆಗೆಯಲಾಗಿದ್ದು ರಸ್ತೆಯುದ್ದಕ್ಕೂ ಜನ ವಾಹನ ನೋಡಿ ರೋಮಾಂಚಿತರಾಗುತ್ತಿದ್ದಾರೆ ಎಂದು ಸಿಬ್ಬಂದಿ ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರನಿಗೆ ಬಹಳ ಸಂತಸದಿಂದ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ