ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡುವ ಮಹಾರಾಷ್ಟ್ರ ನಾಯಕರನ್ನು ಬಂಧಿಸಲಾಗುವುದು: ಜಿ ಪರಮೇಶ್ವರ್

ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡುವ ಮಹಾರಾಷ್ಟ್ರ ನಾಯಕರನ್ನು ಬಂಧಿಸಲಾಗುವುದು: ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 01, 2023 | 5:19 PM

ಮಹಾರಾಷ್ಟ್ರದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದಕ್ಕೆ ಕೊಳ್ಳಿಯಿಟ್ಟ ಬಳಿಕ ಬೆಳಗಾವಿ ಸೇರಿದಂತೆ ಬೀದರ್ ಮತ್ತು ಕಲಬುರಗಿ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ತುಮಕೂರು: ಕನ್ನಡ ರಾಜ್ಯೋತ್ಸವದಂದು (Kannada Rajyotsava) ಪ್ರತಿವರ್ಷ ಬೆಳಗಾವಿಯಲ್ಲಿ ಎಂಇಎಸ್ ಸದಸ್ಯರು (MES members) ಕರಾಳ ದಿನ ಆಚರಿಸುತ್ತಾರೆ ಮತ್ತು ಗೃಹಸಚಿವರಾಗಿದ್ದವರು ಪ್ರತಿಬಾರಿ ಅದರ ನಾಯಕರಿಗೆ ಎಚ್ಚರಿಕೆ ನೀಡುತ್ತಾರೆ. ಇದೊಂಥರಾ ವಾರ್ಷಿಕ ರಿವಾಜು ಆಗಿಬಿಟ್ಟಿದೆ. ತುಮಕೂರು ನಗರದಲ್ಲಿ ಇಂದು ವಿಷಯದ ಬಗ್ಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಮಹಾರಾಷ್ಟ್ರದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದಕ್ಕೆ ಕೊಳ್ಳಿಯಿಟ್ಟ ಬಳಿಕ ಬೆಳಗಾವಿ ಸೇರಿದಂತೆ ಬೀದರ್ ಮತ್ತು ಕಲಬುರಗಿ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದರು. ಎಂಇಎಸ್ ಪುಂಡಾಟದ ಬಗ್ಗೆ ಮಾತಾಡಿದ ಅವರು ಪ್ರತಿವರ್ಷ ಅವರು ಕರಾಳ ದಿನ ಆಚರಿಸುತ್ತಿದ್ದಾರೆ, ಮತ್ತು ಕನ್ನಡ ರಾಜ್ಯೋತ್ಸವದ ದಿನ ಶಿವಸೇನೆಯ ಶಾಸಕರು ಮಂತ್ರಿಗಳು ಬೆಳಗಾವಿಗೆ ಬಂದು ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಾರೆ. ಆದರೆ ರಾಜ್ಯೋತ್ಸವದಂದು ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದು ಭಾಷಣ ಮಾಡುವ ನಾಯಕನ ಸ್ಥಾನಮಾನ ಏನೇ ಆಗಿರಲಿ ಅವರನ್ನು ಬಂಧಿಸಿ ಕಾನೂನು ರೀತ್ಯಾ ಕ್ರಮ ಜರುಗಿಸುಲಾಗುವುದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ