ಡಾಲಿ ಧನಂಜಯ ಮದುವೆ ರಿಷಪ್ಷನ್ ಹಾಕಿರುವ ಸೆಟ್ ಭವ್ಯ ಅಂತ ಹೇಳಿದರೂ ಅಂಡರ್ ಸ್ಟೇಟ್ಮೆಂಟ್ ಅನಿಸಿಕೊಳ್ಳುತ್ತದೆ!

ಅರುಣ್​ ಕುಮಾರ್​ ಬೆಳ್ಳಿ

Updated on: Feb 15, 2025 | 6:59 PM

ವಿದೇಶಿ ಚಿತ್ರರಂಗದ ಕೆಲ ಗಣ್ಯರು, ಕಲಾವಿದರು ಡಾಲಿ ಧನಂಜಯ ಮದುವೆ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರಂತೆ. ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ನಿವಾಸಕ್ಕೆ ಧನಂಜಯ ತೆರಳಿ ಮದುವೆ ಕರೆಯೋಲೆ ನೀಡಿದ್ದನ್ನು ಟಿವಿ9 ವರದಿ ಮಾಡಿದೆ. ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಸಿದ್ದರಾಮಯ್ಯ ವ್ಹೀಲ್ ಚೇರ್ ನಲ್ಲಿ ಓಡಾಡುತ್ತಿದ್ದಾರೆ.

ಮೈಸೂರು: ಡಾಲಿ ಧನಂಜಯ್ ಮತ್ತು ಡಾ ಧನ್ಯತಾ ಅವರ ಅದ್ದೂರಿ ಆರತಕ್ಷತೆಗೆ ಕ್ಷಣಗಣನೆ ಶುರುವಾಗಿದೆ. ರಿಷಪ್ಷನ್ ಗೆ ರೆಡಿಯಾಗಿರುವ ಭವ್ಯವಾದ ವೇದಿಕೆಯನ್ನು ಇಲ್ಲಿ ನೋಡಬಹುದು. ಖ್ಯಾತ ಕಲಾ ನಿರ್ದೇಶಕ, ನಟ ಅರುಣ್ ಸಾಗರ್ ಅವರು ಮೈಸೂರು ಎಕ್ಸಿಬಿಷನ್ ಆವರಣದಲ್ಲಿ ಆರತಕ್ಷತೆಯ ಸೆಟ್ ಹಾಕಿಸಿದ್ದಾರೆ. ಇನ್ ಫ್ಯಾಕ್ಟ್ ಮದುವೆಯ ಎಲ್ಲ ಉಸ್ತುವಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ. ಈ ವಿಶಾಲ ಸೆಟ್​ನ ಭವ್ಯತೆ ನೋಡುಗರ ಮನಸೂರೆಗೊಳ್ಳುತ್ತದೆ. ವೇದಿಕೆಯ ಮೇಲೆಯೇ ಸುಮಾರು ನೂರಿನ್ನೂರು ಜನ ನಿಲ್ಲುವಷ್ಟು ಸ್ಥಳವನ್ನು ಕಲ್ಪಿಸಲಾಗಿದೆ. ಊಟದ ಹಾಲ್ ಕಡೆ ತೆರಳಲು ಪ್ರತ್ಯೇಕ ದ್ವಾರದ ವ್ಯವಸ್ಥೆ ಮಾಡಲಾಗಿದ್ದು ಇದರಿಂದಾಗಿ ನೂಕುನುಗ್ಗಲು ಅಗಲಾರದು. ಒಂದು ಅಂದಾಜಿನ ಪ್ರಕಾರ ಸುಮಾರು 25,000-30,000 ಸಾವಿರ ಜನ ಅರತಕ್ಷತೆಯಲ್ಲಿ ಭಾಗಿಯಾಗಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.