ನಾವು ಮಾಡಿಸಿರೋದು ಜಾತಿ ಸಮೀಕ್ಷೆ, ಕೇಂದ್ರ ಸರ್ಕಾರ ಮಾಡಿಸಲಿರೋದು ಜಾತಿಗಣತಿ: ಶರತ್ ಬಚ್ಚೇಗೌಡ

|

Updated on: Oct 19, 2024 | 5:23 PM

ಡಿಕೆ ಶಿವಕುಮಾರ್ ಅಗಲೀ ಡಿಕೆ ಸುರೇಶ್ ಆಗಲಿ ಜಾತಿಗಣತಿಯನ್ನು ವಿರೋಧಿಸಿಲ್ಲ, ಸಮೀಕ್ಷೆಯು ಸೂಕ್ತ ಮತ್ತು ವೈಜ್ಞಾನಿಕವಾಗಿ ಆಗಿದೆಯೇ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ, ಮುಂದೆ ಕೇಂದ್ರ ಸರ್ಕಾರ ಜಾತಿಗಣತಿ ಮಾಡಿಸಿದಾಗ ಆ ವರದಿಯಲ್ಲಿನ ಮಾಹಿತಿ ಮತ್ತು ಕರ್ನಾಟಕ ಸರ್ಕಾರ ಮಾಡಿಸಿದ ಸಮೀಕ್ಷೆಯ ನಡುವೆ ವ್ಯತ್ಯಾಸಗಳಿರಬಾರದು ಅಂತ ಅವರು ಹೇಳಿದ್ದಾರೆ ಎಂದು ಶರತ್ ಹೇಳಿದರು.

ಬೆಂಗಳೂರು: ನಗರದಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ, ಯಾವುದೋ ಧಾವಂತದಲ್ಲಿ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡೋದ್ರಲ್ಲಿ ಅರ್ಥವಿಲ್ಲ, ರಾಜ್ಯ ಸರ್ಕಾರ ಮಾಡಿಸಿದ ಸಮೀಕ್ಷೆ 2014 ರಲ್ಲಿ ಆರಂಭಗೊಂಡು 2016ರಲ್ಲಿ ಮುಗಿದಿದೆ, ಹಾಗಾಗಿ ವರದಿಯಲ್ಲಿನ ದತ್ತಾಂಶಗಳು 2024 ನೇ ವರ್ಷದ ಸ್ಥಿತಿಗತಿಗೆ ತಾಳೆಯಾಗುತ್ತವೆಯೇ ಅನ್ನೋ ಆತಂಕದಿಂದ ಕೆಲವರು ಅದನ್ನು ವಿರೋಧ ಮಾಡುತ್ತಿದ್ದಾರೆ ಎಂದರು. ಕೇಂದ್ರ ಸರ್ಕಾರವೂ ಜಾತಿಗಣತಿ ಮಾಡಿಸುವ ಯೋಚನೆಯಲ್ಲಿದೆ, ಯಾರೇ ಅದನ್ನು ಮಾಡಿಸಲಿ; ಎಲ್ಲ ಜಾತಿಗಳ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿ ಸೂಕ್ತವಾದ ಫಲ ಎಲ್ಲ ಸಮುದಾಯಗಳಿಗೆ ಸಿಗಲಿ ಅನ್ನೋದೇ ತಮ್ಮ ಆಶಯ ಎಂದು ಶರತ್ ಬಚ್ಚೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸರ್ಕಾರ ಬಿದ್ದರೆ ಬೀಳಲಿ ಜಾತಿಗಣತಿ ಜಾರಿ ಮಾಡಲೇಬೇಕು: ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ