ಎಣ್ಣೆ ಪ್ರಿಯರಿಗೆ ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ಸೆ.1ರಿಂದ ಪಬ್‌, ಬಾರ್‌ ಓಪನ್‌

| Updated By: ಸಾಧು ಶ್ರೀನಾಥ್​

Updated on: Aug 30, 2020 | 2:41 PM

[lazy-load-videos-and-sticky-control id=”Brq7nsAGJqU”] ಬೆಂಗಳೂರು: ಎಣ್ಣೆ ಪ್ರಿಯರಿಗೆ ಕರ್ನಾಟಕ ಸರ್ಕಾರ ಕೊನೆಗೂ ಗುಡ್ ನ್ಯೂಸ್ ಕೊಟ್ಟಿದೆ. ಇದುವರೆಗೆ ಕರ್ನಾಟಕದಲ್ಲಿ ಲಾಕ್‌ಡೌನ್‌ನಿಂದ ಬಂದ್‌ ಆಗಿದ್ದ ಬಾರ್‌, ಪಬ್‌ ಮತ್ತು ರೆಸ್ಟೋರೆಂಟ್‌ಗಳು ಸೆಪ್ಟೆಂಬರ್‌ ಒಂದರಿಂದ ಪುನಾರಾರಂಭಗೊಳ್ಳಲಿವೆ. ಈ ಸಂಬಂಧ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದು, ನಾಳೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ಈ ನೂತನ ಆದೇಶದ ಪ್ರಕಾರ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಧ್ಯಕ್ಕೆ ಶೇ. 50 ರಷ್ಟು ಗ್ರಾಹಕರು ಮಾತ್ರ ಅಲ್ಲಿಯೇ ಕುಳಿತು ಕುಡಿಯಲು ಸರ್ಕಾರ ಅನುಮತಿ […]

ಎಣ್ಣೆ ಪ್ರಿಯರಿಗೆ ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ಸೆ.1ರಿಂದ ಪಬ್‌, ಬಾರ್‌ ಓಪನ್‌
Follow us on

[lazy-load-videos-and-sticky-control id=”Brq7nsAGJqU”]

ಬೆಂಗಳೂರು: ಎಣ್ಣೆ ಪ್ರಿಯರಿಗೆ ಕರ್ನಾಟಕ ಸರ್ಕಾರ ಕೊನೆಗೂ ಗುಡ್ ನ್ಯೂಸ್ ಕೊಟ್ಟಿದೆ. ಇದುವರೆಗೆ ಕರ್ನಾಟಕದಲ್ಲಿ ಲಾಕ್‌ಡೌನ್‌ನಿಂದ ಬಂದ್‌ ಆಗಿದ್ದ ಬಾರ್‌, ಪಬ್‌ ಮತ್ತು ರೆಸ್ಟೋರೆಂಟ್‌ಗಳು ಸೆಪ್ಟೆಂಬರ್‌ ಒಂದರಿಂದ ಪುನಾರಾರಂಭಗೊಳ್ಳಲಿವೆ.

ಈ ಸಂಬಂಧ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದು, ನಾಳೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ಈ ನೂತನ ಆದೇಶದ ಪ್ರಕಾರ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಧ್ಯಕ್ಕೆ ಶೇ. 50 ರಷ್ಟು ಗ್ರಾಹಕರು ಮಾತ್ರ ಅಲ್ಲಿಯೇ ಕುಳಿತು ಕುಡಿಯಲು ಸರ್ಕಾರ ಅನುಮತಿ ನೀಡಲಿದೆ.

ಆದ್ರೆ ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಸರ್ಕಾರ ಸೂಚಿಸಿರುವ ಎಲ್ಲ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಕಡ್ಡಾಯ. ಯಾರಾದರೂ ಈ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದ್ರೆ ಅಂಥವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ.

Published On - 11:21 am, Sun, 30 August 20