- Kannada News Photo gallery Darshan Thoogudeepa and His Son Vineesh in same look In a viral Photo which was taken during The Devil Shoot
ಅದೇ ಖದರ್, ಅದೇ ಹೈಟ್, ಅದೇ ಲುಕ್; ದರ್ಶನ್ ರೀತಿಯೇ ಕಾಣ್ತಾರೆ ವಿನೀಶ್
ನಟ ದರ್ಶನ್ ಅವರು ಸಖತ್ ಎತ್ತರವಾಗಿದ್ದಾರೆ. ಅವರು ಯಾವಾಗಲೂ ತಮ್ಮ ಖದರ್ ಲುಕ್ನಿಂದ ಗಮನ ಸೆಳೆಯುತ್ತಾರೆ. ಅವರ ಮಗ ವಿನೀಶ್ ಕೂಡ ಇದಕ್ಕೆ ಹೊರತಾಗಿಲ್ಲ. ಈಗ ಅವರ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇವೆ.
Updated on:Dec 19, 2025 | 10:57 AM

ನಟ ದರ್ಶನ್ ಹಾಗೂ ಮಗ ವಿನೀಶ್ ಮಧ್ಯೆ ಸಾಕಷ್ಟು ಒಳ್ಳೆಯ ಬಾಂಧವ್ಯ ಇದೆ. ಮಗ ಎನ್ನುವುದಕ್ಕಿಂತ ಹೆಚ್ಚಾಗಿ ಗೆಳೆಯನ ರೀತಿ ವಿನೀಶ್ನ ದರ್ಶನ್ ಟ್ರೀಟ್ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ಫೋಟೋಗಳು ವೈರಲ್ ಆಗುತ್ತವೆ.

ಈಗ ದರ್ಶನ್ ಹಾಗೂ ವಿನೀಶ್ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ದರ್ಶನ್ ಹಾಗೂ ವಿನೀಶ್ ಲುಕ್ ಹಾಗೂ ಖದರ್ ಒಂದೇ ರೀತಿ ಇದೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇವೆ.

ವಿನೀಶ್ ಅವರಿಗೆ ಸ್ವಲ್ಪ ವಿಜಯಲಕ್ಷ್ಮೀ ಅವರ ಹೋಲಿಕೆ ಇದೆ. ಆದರೆ ಎತ್ತರ ಮಾತ್ರ ದರ್ಶನ್ ಅವರದ್ದೇ ಬಂದಿದೆ. ಅವರು ದರ್ಶನ್ ರೀತಿಯೇ ಕಟ್ಟುಮಸ್ತಾಗಿ ಕಾಣಿಸುತ್ತಿದ್ದಾರೆ. ಈ ಸಂದರ್ಭದ ಫೋಟೋನ ‘ಡೆವಿಲ್’ ತಂಡ ಹಂಚಿಕೊಂಡಿದೆ.

ಅಂದಹಾಗೆ, ಇದು ‘ಡೆವಿಲ್’ ಸಿನಿಮಾ ಶೂಟ್ ಸಂದರ್ಭದಲ್ಲಿ ತೆಗೆದ ಫೋಟೋ. ರಾಜಸ್ಥಾನದಲ್ಲಿ ತಂಡ ಬೀಡುಬಿಟ್ಟಾಗ ವಿನೀಶ್ ಕೂಡ ದರ್ಶನ್ ಜೊತೆ ತೆರಳಿದ್ದರು. ತಂದೆಯ ರೀತಿಯೇ ಶರ್ಟ್ ಧರಿಸಿ ಅವರು ಗಮನ ಸೆಳೆದಿದ್ದಾರೆ.

ದರ್ಶನ್ ಅವರಿಗೆ ಕುದುರೆ ಎಂದರೆ ಸಖತ್ ಇಷ್ಟ. ಅವರು ಕುದುರೆ ಸವಾರಿ ಮಾಡುತ್ತಾರೆ. ತಮ್ಮ ಫಾರ್ಮ್ಹೌಸ್ನಲ್ಲಿ ಕುದುರೆಗಳನ್ನು ಅವರು ಸಾಕಿದ್ದಾರೆ. ವಿನೀಶ್ ಕೂಡ ಕುದುರೆ ಸವಾರಿ ಮಾಡಬಲ್ಲರು ಎಂಬುದು ವಿಶೇಷ. ಆ ಸಂದರ್ಭದ ಫೋಟೋನ ವಿನೀಶ್ ಈ ಮೊದಲು ಹಂಚಿಕೊಂಡಿದ್ದರು.
Published On - 10:22 am, Fri, 19 December 25




