Finish Siddaramaiah Comment: ಡಾ ಅಶ್ವಥ್ ನಾರಾಯಣ ವಿರುದ್ಧ ರಾಜ್ಯದ ಐಜಿ ಸುಮೋಟು ಕೇಸ್ ದಾಖಲಿಸಿಕೊಂಡು ಜೈಲಿಗಟ್ಟಬೇಕು: ಸಿಎಮ್ ಇಬ್ರಾಹಿಂ
ಅಶ್ವಥ್ ನಾರಾಯಣ ನೀಡಿರೋದು ಶಾಂತಿ ಕದಡುವ ಹೇಳಿಕೆಯಾಗಿರುವುದರಿಂದ ರಾಜ್ಯ ಐಜಿ ಅವರು ಕೂಡಲೇ ಅವರ ವಿರುದ್ಧ ಸುಮೋಟು ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಹಾಕಬೇಕು ಎಂದು ಇಬ್ರಾಹಿಂ ಹೇಳಿದರು.
ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಸಿದ್ದರಾಮಯ್ಯನವರು (Siddaramaiah) ಬಗ್ಗೆ ಮಾಡಿರುವ ಕಾಮೆಂಟನ್ನು ಪಕ್ಷಾತೀತವಾಗಿ ಖಂಡಿಸಲಾಗುತ್ತಿದೆ. ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಮ್ ಇಬ್ರಾಹಿಂ (CM Ibrahim) ಅವರು ಸಚಿವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಅವರೂ ಟಿಪ್ಪು ಸುಲ್ತಾನ್ ಗುಣಗಾನ ಮಾಡಿದ್ದಾರೆ, ಅವರನ್ನೂ ಈ ಬಿಜೆಪಿಯ ಹುಚ್ಚುಮುಂಡೇ ಗಿರಾಕಿ ಮುಗಿಸುತ್ತಾನಾ? ಅಂತ ಪ್ರಶ್ನಿಸಿದರು. ಅಶ್ವಥ್ ನಾರಾಯಣ ನೀಡಿರೋದು ಶಾಂತಿ ಕದಡುವ ಹೇಳಿಕೆಯಾಗಿರುವುದರಿಂದ ರಾಜ್ಯ ಐಜಿ ಅವರು ಕೂಡಲೇ ಅವರ ವಿರುದ್ಧ ಸುಮೋಟು ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಹಾಕಬೇಕು ಎಂದು ಇಬ್ರಾಹಿಂ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos