ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಮೇಲ್ವಿಚಾರಕ: ಪರೀಕ್ಷೆ ಬಳಿಕ ವಿದ್ಯಾರ್ಥಿನಿ-ತಾಯಿ ಕಣ್ಣೀರು
ಕರ್ನಾಕದಾದ್ಯಂತ ದ್ವಿತೀಯ ಪಿಯುಸಿ ಆರಂಭವಾಗಿದ್ದು, ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಇಂದು(ಮಾರ್ಚ್ 03) ಮ್ಯಾಥ್ಸ್ ಪರೀಕ್ಷೆ ಬರೆದಿದ್ದಾರೆ. ಆದ್ರೆ, ಇಲ್ಲೋರ್ವ ಪರೀಕ್ಷಾ ಮೇಲ್ವಿಚಾರಕ ವಿದ್ಯಾರ್ಥಿಗೆ ಹೆಚ್ಚುವರಿ ಉತ್ತರ ಪತ್ರಿಕೆ ನೀಡಲ್ಲವೆಂಬ ಆರೋಪ ಕೇಳಿಬಂದಿದೆ. ದಾವಣಗೆರೆ ಜಿಲ್ಲೆ ಜಗಳೂರಿನ ಮಾಲತಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪರೀಕ್ಷಾ ಮೇಲ್ವಿಚಾರಕನ ನಡೆಗೆ ವಿದ್ಯಾರ್ಥಿನಿ ಹಾಗೂ ಆಕೆಯ ತಾಯಿ ಕಣ್ಣೀರಿಟ್ಟಿದ್ದಾರೆ.
ದಾವಣಗೆರೆ, (ಮಾರ್ಚ್ 03): ಈಗಾಗಲೇ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಇಂದು (ಮಾರ್ಚ್ 03) ಸೈನ್ಸ್ ವಿಭಾಗದ ಮ್ಯಾಥ್ಸ್(ಗಣಿತ) ಪರೀಕ್ಷೆ ಇತ್ತು. ಪರೀಕ್ಷೆಯಲ್ಲಿ ಮೇಲ್ವಿಚಾರಕ ವಿದ್ಯಾರ್ಥಿನಿಗೆ ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಆರೋಪ ಕೇಳಿಬಂದಿದೆ. ದಾವಣಗೆರೆ ಜಿಲ್ಲೆ ಜಗಳೂರಿನ ಮಾಲತಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಜಗಳೂರಿನ ನಳಂದ ಕಾಲೇಜಿನ ಪಿಯು ವಿದ್ಯಾರ್ಥಿನಿ ಸೌಜನ್ಯ, ಹೆಚ್ಚುವರಿ ಉತ್ತರ ಪತ್ರಿಕೆ(ಎಡಿಷನಲ್ ಶೀಟ್) ನೀಡುವಂತೆ ಮೇಲ್ವಿಕಾರಕನಿಗೆ ಕೇಳಿದ್ದಾಳೆ. ಆದ್ರೆ, ಮೇಲ್ವಿಚಾರಕ ಎಡಿಷನಲ್ ಶೀಟ್ ನೀಡಲು ನಿರಾಕರಿಸಿದ್ದಾನೆ. ಇದರಿಂದ ಸೌಜನ್ಯ 7 ಅಂಕಗಳಿಗೆ ಉತ್ತರ ಬರೆಯುವುದನ್ನು ಬಿಟ್ಟು ಬಂದಿದ್ದಾಳೆ. ಅಲ್ಲದೇ ಪರೀಕ್ಷೆ ಬಳಿಕ ತನ್ನ ತಾಯಿ ಹತ್ತಿರ ಬಂದು ಹೇಳಿ ಕಣ್ಣೀರಿಟ್ಟಿದ್ದಾಳೆ. ಇನ್ನು ಮಗಳಿಗೆ ಆದ ಅನ್ಯಾಯಕ್ಕೆ ತಾಯಿಯೂ ಸಹ ಗಳಗಳನೇ ಅತ್ತಿದ್ದಾರೆ.