ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಶಿಕ್ಷಕನಿಂದ ವಿದ್ಯಾರ್ಥಿನಿಯರಿಗೆ ಥಳಿತ

| Updated By: ವಿವೇಕ ಬಿರಾದಾರ

Updated on: Feb 02, 2024 | 9:23 AM

ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಶಿಕ್ಷಕ ವಿದ್ಯಾರ್ಥಿನಿಯರಿಗೆ ಥಳಿಸಿರುವ ಘಟನೆ ಯಾದಗಿರಿ ತಾಲೂಕಿನ ಬಾಲಚೇಡ್ ಗ್ರಾಮದಲ್ಲಿರುವ ಎಪಿಜೆ ಅಬ್ದುಲ್ ಕಲಾಂ ನವೋದಯ ವಸತಿ ಶಾಲೆಯಲ್ಲಿ ನಡೆದಿದೆ. ಶಿಕ್ಷಕ ಕೋಲಿನಿಂದ ಮನ ಬಂದಂತೆ ಥಳಿಸಿರುವ ವಿಡಿಯೋವನ್ನು ಪೋಷಕರು ಮೊಬೈಲ್​ನಲ್ಲಿ ಸೆರೆಯಾಗಿದೆ.

ಯಾದಗಿರಿ, ಫೆಬ್ರವರಿ 02: ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಶಿಕ್ಷಕ ವಿದ್ಯಾರ್ಥಿನಿಯರಿಗೆ ಥಳಿಸಿರುವ ಘಟನೆ ಯಾದಗಿರಿ (Yadgiri) ತಾಲೂಕಿನ ಬಾಲಚೇಡ್ ಗ್ರಾಮದಲ್ಲಿರುವ ಎಪಿಜೆ ಅಬ್ದುಲ್ ಕಲಾಂ ನವೋದಯ ವಸತಿ ಶಾಲೆಯಲ್ಲಿ (APJ Abdul Kalam Navodaya Residential School) ನಡೆದಿದೆ. ಶಿಕ್ಷಕ ಕೋಲಿನಿಂದ ಮನ ಬಂದಂತೆ ಥಳಿಸಿರುವ ವಿಡಿಯೋವನ್ನು ಪೋಷಕರು ಮೊಬೈಲ್​ನಲ್ಲಿ ಸೆರೆಯಾಗಿದೆ. ಇಂಗ್ಲಿಷ್ ವಿಷಯದಲ್ಲಿ 20 ಅಂಕಗಳಿಗೆ 5 ಅಂಕ ಪಡೆದಿದ್ದಕ್ಕೆ ಸಿಟ್ಟಿಗೆದ್ದ ಅತಿಥಿ ಶಿಕ್ಷಕ ಶಶಿ ಕುಮಾರ್ ಜನವರಿ 30 ರಂದು ವಿದ್ಯಾರ್ಥಿನಿಯರಿಗೆ ಹೊಡೆದಿದ್ದಾನೆ. ಶಿಕ್ಷಕ ಹೊಡೆಯುವ ವಿಡಿಯೋ ಕಂಡ ವಿದ್ಯಾರ್ಥಿನಿಯರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕನ ವರ್ತನೆಯಿಂದ ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ.