ತುಮಕೂರಿನಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗುತ್ತಾ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು! ವಿಡಿಯೋ ಇದೆ

ತುಮಕೂರಿನಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗುತ್ತಾ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು! ವಿಡಿಯೋ ಇದೆ

TV9 Web
| Updated By: sandhya thejappa

Updated on: Feb 16, 2022 | 12:54 PM

ಶಾಲೆಗೆ ಹೋಗಲ್ಲ ಎಂದು ವಾಪಸ್ ಆದ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿದ್ದಾರೆ. 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಕಾಲೇಜಿನಿಂದ ವಾಪಸ್ ಆಗಿದ್ದಾರೆ.

ತುಮಕೂರು: ರಾಜ್ಯದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದ್ದಿದೆ. ಇಂದು ಹೈಕೊರ್ಟ್​ನಲ್ಲಿ (High Court) 2.30ಕ್ಕೆ ಈ ವಿಚಾರಣೆ ನಡೆಯಲಿದೆ. ರಾಜ್ಯವಲ್ಲ ಇಡೀ ದೇಶ ಕೋರ್ಟ್ ತೀರ್ಪಿಗಾಗಿ ಕಾದು ಕುಳಿತಿದೆ. ಇಂದು ತುಮಕೂರಿನಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಪ್ರತಿಭಟನಾ ಮೆರವಣಿಗೆ ಮಾಡಿದ್ದಾರೆ. ಎಂಪ್ರೆಸ್ ಕಾಲೇಜಿನಿಂದ ಟೌನ್​ ಹಾಲ್​ನತ್ತ ವಿದ್ಯಾರ್ಥಿನಿಯರು ತೆರಳಿದ್ದರು. ಈಓ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗುತ್ತಾ ಸಾಗಿದ್ದಾರೆ. ಹಿಜಾಬ್ ತ್ಯಜಿಸಲ್ಲ. ಶಾಲೆಗೆ ಹೋಗಲ್ಲ ಎಂದು ವಾಪಸ್ ಆದ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿದ್ದಾರೆ. 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಕಾಲೇಜಿನಿಂದ ವಾಪಸ್ ಆಗಿದ್ದಾರೆ. ಪೊಲೀಸರ ಮನವೊಲಿಕೆಗೂ ಬಗ್ಗದ ವಿದ್ಯಾರ್ಥಿನಿಯರು ಮನೆಗೂ ಹೋಗದೆ, ಶಾಲೆಗೂ ಹೋಗದೆ ಹೈಡ್ರಾಮಾ ಮಾಡಿದ್ದಾರೆ.