Talent beyond disability: ರಾಂಚಿಯ ದೃಷ್ಟಿಮಾಂದ್ಯ ಶಾಲಾ ವಿದ್ಯಾರ್ಥಿಗಳಿಗೆ ಸಂಗೀತ ಕಲಿಯಲು ದೃಷ್ಟಿವೈಕಲ್ಯ ಅಡ್ಡಿಯಾಗಿಲ್ಲ!
ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಈ ಮಾಧ್ಯಮಿಕ ಶಾಲೆಯಿಂದ ಪ್ರೌಢಶಾಲೆಗೆ ಉನ್ನತೀಕರಿಸಲು ಪ್ರಯತ್ನಗಳು ಜಾರಿಯಲ್ಲಿವೆ.
ರಾಂಚಿ: ರಾಂಚಿಯ ಸರ್ಕಾರಿ ಮಾಧ್ಯಮಿಕ ದೃಷ್ಟಿಮಾಂದ್ಯರ ಶಾಲೆಯ (blind school) ವಿದ್ಯಾರ್ಥಿಗಳಿಗೆ ಸಂಗೀತದ (music) ಬಗ್ಗೆ ವಿಶೇಷವಾದ ಆಸಕ್ತಿ ಮತ್ತು ಅಭಿರುಚಿ ಇದೆ. ಇವರು ದೃಷ್ಟಿಹೀನರಾಗಿರಬಹುದು ಆದರೆ ಸ್ವರ ಮತ್ತು ಕೀಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ತಮ್ಮ ಪೋಷಕರು ಮತ್ತು ಗುರುಗಳ ಪ್ರೋತ್ಸಾಹ ಹಾಗೂ ತಂತ್ರಜ್ಞಾನದ (technology) ನೆರವಿನಿಂದ ಸಂಗೀತದ ಜ್ಞಾನ ಬೆಳೆಸಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳುತ್ತಾರೆ.
ರಾಜ್ ಕುಮಾರ್ ಹೆಸರಿನ ದೃಷ್ಟಿಮಾಂದ್ಯ ವಿದ್ಯಾರ್ಥಿಯು ಕ್ಯಾಸಿಯೋ ನುಡಿಸಲು ಬರುತ್ತಾ ಅಂತ ಕೇಳಿದರೆ, ಹೌದು ಅನ್ನುತ್ತಾರೆ. ಮೊಬೈಲ್ ನಲ್ಲಿ ನೋಡಿ ನುಡಿಸಲು ಕಲಿತೆ ಎಂದು ಹೇಳುವ ರಾಜ್ ಕುಮಾರ್ 15 ನೇ ವಯಸ್ಸಿನಿಂದಲೇ ಕ್ಯಾಸಿಯೋ ನುಡಿಸಲು ಆರಂಭಿಸಿದೆ ಎಂದು ಹೇಳುತ್ತಾರೆ. ಹಿಂದಿ, ಭೋಜ್ಪುರಿ ಮತ್ತು ನಾಗ್ಪುರಿ ಭಾಷೆಯ ಹಾಡುಗಳನ್ನು ಅವರು ನುಡಿಸುತ್ತಾರಂತೆ.
ಇದನ್ನೂ ಓದಿ: Sudan Conflict: ಸುಡಾನ್ನಲ್ಲಿರುವ ಭಾರತೀಯರ ಸುರಕ್ಷತೆಗೆ 4 ದೇಶಗಳ ಜತೆ ಎಸ್ ಜೈಶಂಕರ್ ಮಾತುಕತೆ
ತಬಲಾ ಬಾರಿಸುವ ಚೋಟು ಕುಮಾರ್ ಹೆಸರಿನ ವಿದ್ಯಾರ್ಥಿ ಈ ಶಾಲೆಗೆ ದಾಖಲಾಗುವ ಮೊದಲು ತಾನಿದ್ದ ಹಾಸ್ಟೆಲ್ ನಲ್ಲಿ ತಬಲಾ ಬಾರಿಸುವುದನ್ನು ಕಲಿತೆ ಎಂದು ಹೇಳುತ್ತಾನೆ. ಸಂಗೀತ ಹೇಳಿಕೊಡುವ ಶಿಕ್ಷಕರೊಬ್ಬರು ಅಲ್ಲಿದ್ದರು, ಅವರಿಂದಲೇ ತಬಲಾ ಬಾರಿಸುವುದು ಕಲಿತೆ ಎಂದು ಕುಮಾರ್ ಹೇಳುತ್ತಾನೆ.
ಹಲವಾರು ಯಶೋಗಾಥೆಗಳು ಈ ಶಾಲೆಯೊಂದಿಗೆ ಥಳುಕು ಹಾಕಿಕೊಂಡಿವೆ. ಇಲ್ಲಿ ಅಭ್ಯಾಸ ಮಾಡಿ ಹೊರಬಿದ್ದವರು ಬ್ಯಾಂಕ್ ಮತ್ತು ಭಾರತೀಯ ರೇಲ್ವೇಸ್ ನಲ್ಲಿ ನೌಕರಿಗಳನ್ನು ಗಿಟ್ಟಿಸಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಈ ಮಾಧ್ಯಮಿಕ ಶಾಲೆಯಿಂದ ಪ್ರೌಢಶಾಲೆಗೆ ಉನ್ನತೀಕರಿಸಲು ಪ್ರಯತ್ನಗಳು ಜಾರಿಯಲ್ಲಿವೆ.
‘ಮೊದಲು ಇಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ನಿವೃತ್ತರಾದ ಬಳಿಕ ನಮ್ಮನ್ನು ನೇಮಕ ಮಾಡಿಕೊಳ್ಳಲಾಗಿದೆ. ಇಲ್ಲ್ಲಿ ಕೆಲಸಕ್ಕೆ ಸೇರಿದಾಗ ನಮ್ಮ ಗಮನಕ್ಕೆ ಬಂದ ಮೊದಲ ಸಂಗತಿಯೆಂದರೆ, ಮಕ್ಕಳಲ್ಲಿದ್ದ ಶಿಕ್ಷಣದ ಕೊರತೆ. ಪ್ರತಿ ತರಗತಿಗೆ ನಿಗದಿಯಾಗಿದ್ದ ಪಠ್ಯಕ್ರಮ ಸೂಕ್ತವಾಗಿರಲಿಲ್ಲ. ಹಾಗಾಗಿ ನಾನು ಮೊದಲು ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಿದೆ. ಇಲ್ಲಿಂದ ಪಾಸಾಗಿ ಹೊರಬೀಳುವ ವಿದ್ಯಾರ್ಥಿಗಳು ನಿಸ್ಸಂದೇಹವಾಗಿ ಬುದ್ಧಿವಂತರು. ಅವರಲ್ಲಿ ಕೆಲವರಿಗೆ ರೇಲ್ವೇಸ್ ನಲ್ಲಿ ಕೆಲಸ ಸಿಕ್ಕಿದೆ,’ ಎಂದು ಶಾಲೆಯ ಪ್ರಿನ್ಸಿಪಾಲ್ ರೋವಿಶ್ ಕುಮಾರ್ ಹೇಳುತ್ತಾರೆ.
ಇದನ್ನೂ ಓದಿ: ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಓಡಿದ ಒಡಿಯಾ ಮಹಿಳೆ; ವಿಡಿಯೋ ವೈರಲ್
ಮಕ್ಕಳಿಗೆ ಬ್ರೈಲ್ ಲಿಪಿ, ಹಿಂದಿ ಮತ್ತು ಗಣಿತ ಹೇಳಿಕೊಡುವ ಸಹಾಯಕ ಶಿಕ್ಷಕ ರಮೇಶ್ ಮಹ್ತೋ ಮಕ್ಕಳಲ್ಲಿ ವಿಶೇಷ ಪ್ರತಿಭೆ ಅಡಗಿದೆ ಎನ್ನುತ್ತಾರೆ.
‘ದೃಷ್ಟಿಮಾಂದ್ಯ ಮಕ್ಕಳು ನೋಡಲು ಸಾಧ್ಯವಾಗದ ಕಾರಣ ಅವರ ಕೆಲಸ ಕೇಳಿಸಿಕೊಳ್ಳುವವರ ಅವಲಂಬಿತವಾಗಿರುತ್ತದೆ. ಹಾಗಾಗೇ, ಅವರಿಗೆ ಸಂಗೀತದ ಮೇಲೆ ಹೆಚ್ಚಿನ ಅಸಕ್ತಿಯಿದೆ. ಸಂಗೀತದ ಮೂಲಕ ಭವಿಷ್ಯದ ದಾರಿ ಕಂಡುಕೊಳ್ಳುವ ಮತ್ತು ಸಾಧನೆ ಮಾಡುವ ವಿಶ್ವಾಸವನ್ನು ಮಕ್ಕಳು ಹೊಂದಿದ್ದಾರೆ. ಅವರಲ್ಲಿರುವ ಈ ಜಿಜ್ಞಾಸೆ ನಮಗೆ ಸಂತೋಷ ನೀಡುತ್ತದೆ,’ ಎಂದು ಮಹ್ತೋ ಹೇಳುತ್ತಾರೆ.
ದೃಷ್ಟಿವೈಕಲ್ಯದಿಂದ ಬಳಲುತ್ತಿದ್ದರೂ ಈ ಶಾಲೆಯ ವಿದ್ಯಾರ್ಥಿಗಳು ತಾವು ಮಾಡುವುದರಲ್ಲೆಲ್ಲ ಯಶ ಕಾಣಲು ತವಕಿಸುತ್ತಾರೆ. ತಮ್ಮ ಬದುಕನ್ನು ಉಜ್ವಲಗೊಳಿಸಿಕೊಳ್ಳುವ ಅವರ ನಿರೀಕ್ಷೆಗಳಿಗೆ ಸಂಗೀತ ಒಂದು ಆಶಾಕಿರಣವಾಗಿ ಲಭ್ಯವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ